ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಜೆಡಿಎಸ್ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ಸೇರಿದಂತೆ ಮತ್ತಿತರರ ಹೆಸರು ಕೇಳಿ ಬಂದಿದ್ದು, ಸರಿಯಾದ ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದರು.
ಬೆಂಗಳೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎ. ಮಂಜು ಅವರಿಗೆ ಪೆನ್‌ಡ್ರೈವ್ ಕೊಟ್ಟಿದ್ದೆ ಎಂದು ಯಾರೋ ಒಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಎಸ್‌ಐಟಿ ತನಿಖೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬೆನ್ನು ತಟ್ಟಿಕೊಂಡಿದ್ದಾರೆ. ಸರಿಯಾದ ತನಿಖೆ ನಡೆಸುವ ಬಗ್ಗೆ ನಮಗೂ ವಿಶ್ವಾಸವಿದೆ. ನಂತರ ಎಲ್ಲ ತಿಳಿಯಲಿದೆ’ ಎಂದರು.
ಅಪಹರಣ ಪ್ರಕರಣದ ಸಂತ್ರಸ್ತೆ ಹುಣಸೂರಿನ ಮನೆಯಲ್ಲೇ ಇದ್ದರು. ಅಲ್ಲಿಂದಲೇ ಪೊಲೀಸರು ಕರೆದುಕೊಂಡು ಹೋದರು ಎಂದು ಅವರ ಮಗಳು-ಅಳಿಯ ಹೇಳಿದ್ದಾರೆ. ಸಂತ್ರಸ್ತೆಯ ಹೇಳಿಕೆಯೂ ಹರಿದಾಡುತ್ತಿದೆ. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದರು.