ಗದಗ : ಕಳೆದ ವರ್ಷ ಬೆಳಗಾವಿ ಜಿಲ್ಲೆಯ ವಂಟಮುರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಗದಗದಲ್ಲಿ ಮತ್ತೊಂದು ಘಟನೆ ನಡೆದಿದೆ. ಹಾಡು ಹಗಲೇ ಮನೆಗೆ ನುಗ್ಗಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಮಹಿಳೆಯ ಸೀರೆಯನ್ನು ದುಷ್ಕರ್ಮಿಗಳು ಎಳೆದಾಡಿರುವ ಘಟನೆ ನಡೆದಿದೆ.
ಗದಗದ ಪಂಚಾಕ್ಷರಿ ನಗರದಲ್ಲಿ ನಡೆದಿರುವಂತಹ ಘಟನೆಯಾಗಿದ್ದು, ಮನೆಗೆ ನುಗ್ಗಿ ಟಿವಿ ಫ್ರಿಜ್ ಧ್ವಂಸಗೊಳಿಸಿದ್ದಾರೆ. ಈ ವೇಳೆ ಐವರು ದುಷ್ಕರ್ಮಿಗಳ ಗ್ಯಾಂಗ್ ಜೀಪಿಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಪ್ರಶ್ನೆ ಮಾಡಿದ ಮಹಿಳೆಯ ಸೀರೆ ಎಳೆದು ಅಸಭ್ಯವಾಗಿ ವರ್ತಿಸಿದ್ದಾರೆ.
ಪ್ರಕಾಶ್ ನಿಡಗುಂದಿ ಎಂಬುವವರ ಮನೆಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಾರೆ. ಹುಯ್ಲಗೋಳ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಈ ಕುರಿದಂತೆ ಆರೋಪ ಕೇಳಿ ಬಂದಿದ್ದು, ಗ್ರಾಂ ಪಂ ಸದಸ್ಯ ಮಿಲಿಂದ್ ಕಾಳೆ ಹಾಗೂ ನಾಗರಾಜ್ ಕಾಳೆ, ಕುಮ್ಮಕ್ಕು ನೀಡಿದ್ದಾರೆ. ನಮ್ಮ ಜೀವಕ್ಕೆ ಏನಾದರು ಆದರೆ ಇವರೇ ಹೊಣೆಗಾರರು ಎಂದು ಹಲ್ಲೆಗೆ ಒಳಗದ ಕುಟುಂಬಸ್ಥರು ತಿಳಿಸಿದ್ದಾರೆ.ಗದಗ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.