ದಕ್ಷಿಣಕನ್ನಡ : ವ್ಯಕ್ತಿ ಒಬ್ಬ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿಯ ಪಾರೆ ಗ್ರಾಮದಲ್ಲಿ ನಡೆದಿದೆ.ಆದರೆ ಮೃತ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೃತ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಪಾರೆ ಗ್ರಾಮದಲ್ಲಿ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಚೇತನ್ (33) ಎನ್ನುವ ಮೃತ ವ್ಯಕ್ತಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆಂದು ತಾಯಿ ಉಮಾದೇವಿ ದೂರು ಸಲ್ಲಿಸಿದ್ದಾರೆ.
ಆದರೆ ಶವ ಕಂಡು ಅನುಮಾನಗೊಂಡ ಪೂತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಕುಡಿದು ಬಂದು ತಾಯಿ ಜೊತೆಗೆ ಚೇತನ್ ಜಗಳವಾಡಿದ್ದಾನೆ. ನಂತರ ಪಕ್ಕದ ಮನೆಯ ಯೂಸುಫ್ ಬಳಿಗೆ ತೆರಳಿದ್ದಾನೆ. ಚೇತನ್ ತಾಯಿಗೆ ಯೂಸಫ್ ಕರೆ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾನೆ.
ನಂತರ ತಾಯಿ ಉಮಾದೇವಿ ಯೂಸುಫ್ ಮನೆಗೆ ಬಂದಿದ್ದರು. ಚೇತನ ಸೊಂಟಕ್ಕೆ ನಾಯಿಗೆ ಕಟ್ಟಿ ಹಾಕುವ ಚೈನ್ ಕಟ್ಟಲಾಗಿತ್ತು ಎನ್ನಲಾಗುತ್ತಿದೆ. ಚೇತನ್ ಸೊಂಟಕ್ಕೆ ಕಟ್ಟಿ, ಯ್ಯೂಸುಫ್ ಮತ್ತು ಸ್ಥಳೀಯರು ಎಳೆದು ಒಯ್ದಿದ್ದರು. ಈ ವೇಳೆ ಚೈನ್ ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಚೇತನ್ ಸಾವು ಇದೀಗ ಶಂಕೆ ಮೂಡಿಸುತ್ತಿದೆ. ಪ್ರಕರಣ ಸಂಬಂಧ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.