ಮಂಡ್ಯ : ಆಶೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಆರಂಭ ಮಾಡುತ್ತಿದ್ದು ಇದಕ್ಕೆ ಇದೀಗ ಕೃಷಿ ಸಚಿವ ಚೆಲುವರಾಯಸ್ವಾಮಿ ಎಚ್ಡಿಕೆ ಆರೋಪಕ್ಕೆ ತಿರುಗೇಟು ನೀಡಿದ್ದು, ಪೆನ್ ಡ್ರೈವ್ ಪ್ರಕರಣದಿಂದ ಮೈತ್ರಿಯಲ್ಲಿ ಕುಂದರ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಅಭದ್ರತೆ ಕಾಡುತ್ತಿದೆ. ಎಚ್ಡಿಕೆ ಈಗ ಚೆಲುವರಾಯಸ್ವಾಮಿ ಯಾವನ್ರಿ ಅಂತಾರೆ ಡಿಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದವರು.ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಸಮರ್ಥವಾಗಿ ಆ ಸ್ಥಾನವನ್ನು ನಿಭಾಯಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು 136 ಸ್ಥಾನಗಳನ್ನು ಗೆಲ್ಲಿಸಿ ಸರ್ಕಾರವನ್ನು ತಂದಿದ್ದಾರೆ. ಈವರೆಗೆ ಎಚ್ ಡಿ ದೇವೇಗೌಡ ಜೆಡಿಎಸ್ ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಬಂದರು.. ಅದನ್ನು ಮುಂದುವರೆಸಲು ಆಗದೆ ಬಿಜೆಪಿ ಜೊತೆಗೆ ಮೈತ್ರಿಯಾಗಿದ್ದಾರೆ.ಪೆನ್ ಡ್ರೈವ್ ಪ್ರಕರಣದಿಂದ ಮೈತ್ರಿಯಲ್ಲಿ ಗೊಂದಲ ಸೃಷ್ಟಿಯಾಗಿದೆ.ಈ ವೇಳೆ ಡಿಕೆ ಶಿವಕುಮಾರ್ ಮೇಲೆ ಮಾತನಾಡುವುದರಿಂದ ವ್ಯಕ್ತಿತ್ವ ಅಲ್ಲಾಡಿಸಬಹುದು.ಈ ವಿಷಯ ಡೈವರ್ಟ್ ಮಾಡಬಹುದು ಎಂಬ ಪ್ಲಾನ್ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ರೇವಣ್ಣ ಕುಟುಂಬ ಹಾಗೂ ನನ್ನ ಕುಟುಂಬ ಬೇರೆ ಬೇರೆ ಎಂಬ ಹೇಳಿಕೆಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅಣ್ಣನ ಮಗ ಪ್ರಜ್ವಲ್. ಎಚ್ ಡಿ ಕುಮಾರಸ್ವಾಮಿ ದೇವ ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್ ಕರೆಸಬೇಕಲ್ವಾ? ಹೌದಾ ಹಾಗಾದರೆ ಇವಾಗ ಯಾರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಸಂತ್ರಸ್ತೆಯರ ಬಗ್ಗೆ ಅನುಕಂಪ ತೋರಲಿಲ್ಲ. ಅವರ ಕ್ಷಮೆ ಕೂಡ ಕೇಳಲಿಲ್ಲ. ಪೆನ್ ಡ್ರೈವ್ ಎಲ್ಲಿಂದ ಬಂತು? ವಿಡಿಯೋ ಮಾಡಿದವರು ಯಾರು? ಸಂತ್ರಸ್ತೆಯರನ್ನ ಬೀದಿಗೆ ತಂದವರು ಯಾರು ಎಂದು ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ. ಡಿಕೆ ಶಿವಕುಮಾರ್ ಬಳಿ ಮಾಹಿತಿ ನೀಡಿ ಸಂತ್ರಸ್ತರು, ಸಂತ್ರಸ್ತೆಯರ ಪರ ಇರುವವರು ಚರ್ಚೆ ಮಾಡಿದರೆ ತಪ್ಪೇನು? ತನಿಖೆ ಆಗುವವರೆಗೆ ಕಾಯುವ ತಾಳ್ಮೆ ಜೆಡಿಎಸ್ ನವರಿಗೆ ಇಲ್ಲ.ಹಲವು ಪ್ರಕರಣಗಳಲ್ಲಿ ರಾಜ್ಯದ ತನಿಖಾ ಸಂಸ್ಥೆಯಿಂದ ನ್ಯಾಯ ಸಿಕ್ಕಿದೆ. ಸಿಬಿಐ ಮಾಡಿದ ತನಿಖೆಗಳಲ್ಲಿ ಕ್ಲೀನ್ ಚಿಟ್ ಇಲ್ಲ ಮೂಲೆ ಸೇರಿವೆ. ಕುಮಾರಸ್ವಾಮಿಯೇ ರಾಜ್ಯದ ಪೊಲೀಸರನ್ನು ದಕ್ಷರು ಎಂದಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.