ನವದೆಹಲಿ : ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಸ್ಪಷ್ಟನೆ ಒಂದನ್ನು ನೀಡಿದ್ದು, ಪ್ರಜ್ವಲ್ ವಿರುದ್ಧ 700 ಮಹಿಳೆಯರು ರಾಷ್ಟ್ರ ಮಹಿಳಾ ಆಗೋಕೆ ದೂರು ನೀಡಿದ್ದಾರೆ ಎಂಬುದು ಸುಳ್ಳು ಎಂದು ಮಹಿಳಾ ಆಯೋಗ ಇದೀಗ ಸ್ಪಷ್ಟನೆ ನೀಡಿದೆ.
ಹೌದು ಅಖಿಲ ವಿಡಿಯೋ ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 700 ಮಹಿಳೆಯರು ರಹಸ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡುತ್ತಿತ್ತು.
ಇದೀಗ ರಾಷ್ಟೀಯ ಮಹಿಳಾ ಆಯೋಗ ಸ್ಪಷ್ಟನೆ ನೀಡಿದ್ದು, ಪ್ರಜ್ವಲ್ ಪ್ರಕರಣ ಸಂಬಂಧಪಟ್ಟ ರಾಷ್ಟ್ರೀಯ ಮಹಿಳಾ ಆಯೋಗ ಸ್ಪಷ್ಟನೆ ನೀಡಿದ್ದು, 700 ಮಹಿಳೆಯರು ಎನ್ ಸಿಡಬ್ಲ್ಯೂಗೆ ಯಾವುದೇ ದೂರನ್ನು ನೀಡಿಲ್ಲ. ಈ ಬಗ್ಗೆ ಕೆಲವು ಮಾಧ್ಯಮಗಳು ಸುಳ್ಳು ವರದಿ ಮಾಡುತ್ತಿವೆ ಎಂದು ಸ್ಪಷ್ಟನೆ ನೀಡಿದೆ.