ಚಿತ್ರದುರ್ಗ : ಪತಿಯ ಹಣದ ಆಸೆಗೆ ಬೇಸತ್ತ ಗೃಹಿಣಿ ಒಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.
ಹೌದು, ತುಮಕೂರು ಮೂಲದ ಗೀತಶ್ರೀ ಮೃತ ರ್ದುದೈವಿ. ಆಕೆ ಹೊಸದುರ್ಗದ ಗೊರವನಕಲ್ಲು ಗ್ರಾಮದ ಪ್ರಭುಕುಮಾರ್ ಜೊತೆ ಐದಾರು ವರ್ಷದ ಹಿಂದೆ ಮದುವೆ ಆಗಿದ್ದರು. ವಿದ್ಯಾವಂತನಾಗಿದ್ದ ಪ್ರಭುಕುಮಾರ್ ಇಂದಲ್ಲ, ನಾಳೆ ಸರ್ಕಾರಿ ಉದ್ಯೋಗ ಸಿಗುತ್ತದೆಂದು ನಂಬಿಸಿದ್ದನು.
ಪ್ರಭುಕುಮಾರ್ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೆ ಗೀತಶ್ರೀ ಕೂಡ ಖಾಸಗಿ ಶಾಲೆ ಒಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಇವರಿಗೆ ಮುದ್ದಾದ ಹೆಣ್ಣು ಮಗು ಕೂಡ ಇತ್ತು ಎಂದು ಹೇಳಲಾಗುತ್ತಿದ್ದು, ಆದರೆ ಇತ್ತೀಚಿಗೆ ವರದಕ್ಷಿಣೆ ವಿಚಾರದಲ್ಲಿ ಪ್ರಭುಕುಮಾರ್ ಗೀತಶ್ರೀಗೆ ಕಿರುಕುಳ ನೀಡಲು ಆರಂಭಿಸಿದ್ದ ಕಳೆದ ಕೆಲವು ದಿನಗಳ ಹಿಂದೆ ಗೀತಶ್ರೀ ಅವರ ಮನೆ ಸೇರಿದಳು ಆದರೆ ನಾಲ್ಕು ದಿನಗಳ ಹಿಂದೆ ಮತ್ತೆ ಗೀತಾ ಶ್ರೀ ಗಂಡನ ಮನೆಗೆ ಬಂದಿದ್ದಳು.
ಆದರೆ ಇಂದು ಗೀತಶ್ರೀ ಅವಳ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರಿಂದ ಪತಿಯೇ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕ ಆಡುತ್ತಿದ್ದಾನೆ ಎಂದು ಮೃತ ಗೀತಶ್ರೀ ಸಹೋದರ ನಿರಂಜನ ಗಂಭೀರವಾದ ಆರೋಪ ಮಾಡುತ್ತಿದ್ದಾನೆ ಘಟನಾ ನಂತರ ಪ್ರಭುಕುಮಾರ್ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದ್ದು ಸದ್ಯ ಘಟನೆ ಕುರಿತಂತೆ ಹೊಸದುರ್ಗ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಪ್ರಭು ಕುಮಾರ್ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ತಿಳಿದುಬಂದಿದೆ.