ಬೆಂಗಳೂರು :ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಈ ಸಂಬಂಧ 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಿರುವುದಾಗಿ ಇಂಟರ್ ಪೋಲ್ ಎಸ್‌ಐಟಿಗೆ ಮಾಹಿತಿ ನೀಡಿದೆ. ಇದೆಲ್ಲದರ ಮಧ್ಯ ಪ್ರಜ್ವಲ್ ಅವರನ್ನು ಬಂಧಿಸಲು ಕಳೆದ ಎರಡು ದಿನಗಳ ಹಿಂದೆ ಎಸ್ಐಟಿ ಒಂದು ತಂಡ ವಿದೇಶಕ್ಕೆ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಶ್ಲೀಲ ವಿಡಿಯೋ ಪ್ರಕಾರಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಇದೀಗ ಎಸ್ಐಟಿ ಅಧಿಕಾರಿಗಳು ಅವರ ಬಂಧನಕ್ಕೆ ಬೆಲೆ ಬೀಸಿದ್ದು, ಕಳೆದ ಎರಡು ದಿನಗಳ ಹಿಂದೆ ಎಸ್ಐಟಿ ಒಂದು ತಂಡ ವಿದೇಶಕ್ಕೆ ತೆರಳಿದೆ. ಹಾಗಾಗಿ ವಿದೇಶದಲ್ಲಿ ರೇವಣ್ಣ ಸಿಕ್ಕರೆ ಬಹುತೇಕ ಅವರನ್ನು ಅಲ್ಲಿ ಬಂಧಿಸಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಹೌದು ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿದರು. ಆದರೆ ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವ ಕಾರಣ ನನಗೆ ಸಮಯಾವಕಾಶ ಕೊಡಿ ಎಂದು ತಮ್ಮ ವಕೀಲರ ಮೂಲಕ ಕೇಳಿಕೊಂಡಿದ್ದರು.ಇದೀಗ ಅವರ ಸಮಯಾವಕಾಶ ಅಂತ್ಯವಾಗಿದ್ದು, ಪ್ರಜ್ವಲ್ ಬಂಧನಕ್ಕೆ ಬಲೇ ಬೀಸಿದ ಎಸ್ಐಟಿ ಅಧಿಕಾರಿಗಳು ಒಂದು SIT ತಂಡ ವಿದೇಶಕೆ ಹೋಗಿರೋ ಬಗ್ಗೆ ಮಾಹಿತಿ ಸಿಕ್ಕಿದೆ.ಎರಡು ದಿನಗಳ ಹಿಂದೆ ಎಸ್ಐಟಿ ತಂಡ ವಿದೇಶಕ್ಕೆ ತೆರಳಿದ್ದಾರೆ.ಪ್ರಜ್ವಲ್ ಕೇಳಿದ ಸಮಯಾವಕಾಶ ಮುಗಿದ ಹಿನ್ನೆಲೆ ಸೊಸೈಟಿ ಅಧಿಕಾರಿಗಳು ಆಗಿದ್ದು ಎರಡು ದಿನಗಳ ಹಿಂದೆ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಕಾರ್ನರ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗ್ಲೇ 196 ರಾಷ್ಟ್ರಗಳಿಗೆ ಮಾಹಿತಿ ರವಾನಿಸಲಾಗಿದೆ.ಪ್ರಜ್ವಲ್ ರೇವಣ್ಣ ಬಗ್ಗೆ ಮಾಹಿತಿ ಸಿಕ್ಕರೆ ಹಂಚಿಕೊಳ್ಳುತ್ತೇವೆ ಎಂದು ಇಂಟರ್ ಪೋಲ್ ಮಾಹಿತಿ ರವಾನೆ ಬಗ್ಗೆ SIT ಗೆ ಮಾಹಿತಿ ನೀಡಿದೆ. ಪ್ರಜ್ವಲ್ ರೇವಣ್ಣ ಯಾವುದೇ ಏರ್ಪೋರ್ಟ್, ಬಂದರೂ, ಗಡಿಯಲ್ಲಿ ಕಾಣಿಸಿದರೆ ಮಾಹಿತಿ ನೀಡಲಾಗುತ್ತದೆ ಎಂದು ಇಂಟರ್ ಪೋಲ್ ಎಸ್‌ಐಟಿಗೆ ಮಾಹಿತಿ ನೀಡಿದೆ.ನೆನ್ನೆ ಸಂಜೆ ಎಸ್‌ಐಟಿಗೆ ಸಿಕ್ಕಿದೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಬ್ಲೂ ಕಾರ್ನರ್ ಎ ನೋಟೀಸ್ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ ಅವರ ಚಲನ ವಲನಗಳು ಏನು ಅವರು ಏನು ಮಾಡುತ್ತಿದ್ದಾರೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಯಾವಾಗ ಸಂಚರಿಸುತ್ತಾರೆ ಪ್ರತಿಯೊಂದು ವಿಷಯ ಕೂಡ ಎಂಟರ್ಪ್ರೈಟ್ ನಿಂದ ಎಸ್‌ಐಟಿಗೆ ಮಾಹಿತಿ ಲಭ್ಯವಾಗುತ್ತದೆ.ಹಾಗಾಗಿ ಇದೀಗ ಎಂಟರ್ ಪೋಲ್ 196 ರಾಷ್ಟ್ರಗಳಿಗೆ ಮಾಹಿತಿ ಕಳುಹಿಸಿದೆ ಎಂದು ಎಸ್‌ಐಟಿಗೆ ಮಾಹಿತಿ ನೀಡಿದೆ.
ಈಗಾಗಲೇ ಮಹಿಳೆ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಡಿಎಸ್ ಶಾಸಕರಾಗಿರುವ ಎಚ್ ಡಿ ರೇವಣ್ಣ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಎಸ್ಐಟಿ ಅಧಿಕಾರಿಗಳ ಒಂದು ತಂಡ ವಿದೇಶಕ್ಕೆ ತೆರಳಿದೆ ಒಂದು ವೇಳೆ ಅಲ್ಲಿಗೆ ಸಿಕ್ಕರೆ ಪ್ರಜ್ವಲ ರೇವಣ್ಣ ಅವರನ್ನು ವಿದೇಶದಲ್ಲಿಯೇ ಬಂಧಿಸಿ ಕರೆತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.