ಗೋಕಾರ್ಣ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿಪೂಜೆಯ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ನಡುವೆ ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡದೇ ಇದ್ದ ಸನ್ನಿವೇಶ ಕಂಡು ಬಂದಿದೆ, ಅಂತ ಭಕ್ತರು ಆರೋಪಿಸಿದ್ದಾರೆ.
ನಂದಿ ಮಂಟಪದಲ್ಲಿ ತೀರ್ಥ ನೀಡುವ ಬಾರಿಗಾಗಿ ಎರಡು ಕುಟುಂಬದವರು ದೇವಸ್ಥಾನದಲ್ಲಿ ಜಗಳವಾಡಿಕೊಂಡಿದ್ದಾರೆ ಅಂತ ಆರೋಪಿಸಲಾಗಿದೆ. ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕು ನಮ್ಮ ಬಾರಿ ಎಂದು ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಕುಟುಂಬ ತಗಾದೆ ತೆಗೆದಿದ್ದ ಕಾರಣಕ್ಕೆ ಈ ಗಲಾಟೆ ನಡೆದಿದೆಯಂತೆ. ಅಂದ ಹಾಗೇ ಜಂಬೆ ಕುಟುಂಬ ಹಾಗೂ ಗೋಪಿ ಕುಟುಂಬ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಿದ್ದನ್ನು ಸ್ಮರಿಸಬಹುದಾಗಿದೆ.