ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗುತ್ತಿದ್ದಂತೇ, ಅವಾಂತರ ಆರಂಭಗೊಂಡಿದೆ. ನಮ್ಮ ಮೆಟ್ರೋದ ಮಾರ್ಗವೊಂದರಲ್ಲಿ ಮಣ್ಣು ಕುಸಿತದಿಂದ ಹಾನಿಯಾದ ಪರಿಣಾಮ, ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗವನ್ನು ಮುಚ್ಚಲಾಗಿದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ ಮಾಹಿತಿ ಹಂಚಿಕೊಂಡಿದ್ದು, ಇಂದು ಭಾರೀ ಮಳೆಯಿಂದಾಗಿ ಪಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ ತಾತ್ಕಾಲಿಕ ತಡೆ ಪೈಲ್ ವ್ಯವಸ್ಥೆಯು ಸಂಜೆ 5.45 ರ ಸುಮಾರಿಗೆ ವಿಫಲವಾಗಿದೆ. ಇದರ ಪರಿಣಾಮವಾಗಿ ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗವು ಹಾನಿಯಾಗಿರುವ ಕಾರಣ ಬೋರ್ ಬ್ಯಾಂಕ್ ರಸ್ತೆಯನ್ನು ಮುಚ್ಚಲಾಗಿದೆ ಎಂದು ತಿಳಿಸಿದೆ.
ಇನ್ನೂ ಮರುಸ್ಥಾಪನೆ ಮಾಡುವವರೆಗೆ ರಸ್ತೆ ಮುಚ್ಚಿರುತ್ತದೆ. ವಾಹನ ಚಲನೆಗೆ ಪರ್ಯಾಯ ಮಾರ್ಗ ಮಾಡಲಾಗಿದೆ. ಯಾವುದೇ ವ್ಯಕ್ತಿಗಳು ಗಾಯಗೊಂಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಈ ಅವಧಿಯ ನಂತ್ರ ಈ ಖಾತೆಗಳನ್ನ ಮುಚ್ಚಲಾಗುವುದು : ಗ್ರಾಹಕರಿಗೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಎಚ್ಚರಿಕೆ