ಬೆಂಗಳೂರು : ಪ್ರಜ್ವಲ್ ರೇವಣ್ಣ ಶ್ರೀಲ ವಿಡಿಯೋ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಗಂಭೀರವಾದ ಆರೋಪ ಮಾಡಿದ್ದು ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿಯನ್ನು ಕೂಡ ಕಿಡ್ನ್ಯಾಪ್ ಮಾಡಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ನಡೆದಾಗ ನಮಗೆ ನ್ಯಾಯ ಸಿಗಲಿಲ್ಲ. ಈ ಹಿಂದೆ ಕಾರ್ತಿಕ್ ಗೌಡ ಪತ್ನಿಯನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಆಗ ನಾನೇ ಖುದ್ದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೆ ಎಂದು ತಿಳಿಸಿದರು.
ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದೆ ಆದರೂ ನ್ಯಾಯ ಸಿಗಲಿಲ್ಲ. ಕಾಂಗ್ರೆಸ್ ನಾಯಕರನ್ನೇ ಮಹಿಳಾ ಆಯೋಗದ ಅಧ್ಯಕ್ಷ ಮಾಡಿದ್ದಾರೆ.ಮಹಿಳಾ ಆಯೋಗದ ಅಧ್ಯಕ್ಷೆ ಪತ್ರವನ್ನು ಸಿಎಂ ಪುರಸ್ಕರಿಸುತ್ತಾರೆ ಎಂದು ಬೆಂಗಳೂರಿನಲ್ಲಿ ದೇವರಾಜೇಗೌಡ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬೆತ್ತಲೆ ಮಾಡಲು ಒಂದು ಗ್ಯಾಂಗ್ ರೆಡಿಯಾಗಿತ್ತು.ಅದು ಕೂಡ ರಾಜಕೀಯ ಷಡ್ಯಂತ್ರವಾಗಿತ್ತು. ಈಗಾಗಲೇ ನಾನು ದೂರು ನೀಡಿದ್ದೇನೆ. ಆಗ ಹೆಬ್ಬಾಳ ಠಾಣೆಯಲ್ಲಿ ದೂರು ಸಲ್ಲಿಸಿದ್ದೆ. ಪ್ರಜ್ವಲ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ಕೊಟ್ಟ ನಂತರ FIR ಆಯ್ತು.
ಎಫ್ಐಆರ್ ಆದ ನಂತರ ಮತ್ತೆ ಲೈಂಗಿಕ ದೌರ್ಜನ್ಯ ಕೆಎಸ್ ಆಯ್ತು. ಪೆನ್ ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧ ಕೂಡ ಎಫ್ಐಆರ್ ಆಗಿತ್ತು.ಆದರೆ ಅದನ್ನು ಎಸ್ಐಟಿಗೆ ವರ್ಗಾವಣೆ ಮಾಡಿಲ್ಲ ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿ ಕರೆಯುವ ಅಗತ್ಯವಿಲ್ಲ ಆದರೂ ಅಧಿಕಾರಿಗಳು ನನ್ನಿಂದ ಹೇಳಿಕೆಗಳನ್ನು ಪಡೆದರು ಎಂದು ಹೇಳಿದರು.