ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣ ಸದ್ಯ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು ದಿನದಿಂದ ದಿನಕ್ಕೆ ಈ ಒಂದು ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸ್ಫೋಟಕವಾದಂತಹ ಹೇಳಿಕೆ ನೀಡಿದ್ದು, ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಬೆಂಗಳೂರಿನಲ್ಲಿಯೇ ಇದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಕ್ಷಣೆ ನೀಡಿದ್ದಾರೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು. ಆದ್ರೆ, ಇದುವರೆಗೂ ಏನು ಮಾಡಿಲ್ಲ. ನವೀನ್, ಕಾರ್ತಿಕ್, ಶ್ರೇಯಸ್ ನೋಟಿಸ್ ಕೊಟ್ಟಿಲ್ಲ, ರೇವಣ್ಣಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲೇ ಪ್ರಜ್ವಲ್ ಮಾಜಿ ಡ್ರೈವರ್ ಕಾರ್ತಿಕ್ ಇದ್ದಾನೆ. ನಾನು ಗಲಭೆಗೆ ಪ್ರಚೋದನೆ ಮಾಡೋದಿಲ್ಲ. ಕಾರ್ತಿಕ್ನನ್ನು ಖಾಸಗಿ ಚಾನೆಲ್ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
14 ವರ್ಷದಿಂದ ಕಾರ್ತಿಕ್ ಕೆಲಸದಲ್ಲಿ ಇದ್ದವನು, ಪ್ರಜ್ವಲ್ ನಡವಳಿಕೆ ಗೊತ್ತಿದ್ರೆ ಕೆಲಸ ಬಿಡಬೇಕಿತ್ತು. ಇದೀಗ ಬಂಡೆ ರಕ್ಷಣೆ ಮಾಡುತ್ತೆ ಎಂದು ಕಾಯ್ತಾ ಇದ್ದಾನೆ.ನುಗ್ಗಿಸಿ ಹೊಡೆಸೋದಿಲ್ಲ ಎಂದು ಸುಮ್ಮನೆ ಇದ್ದೀನಿ. ಇಷ್ಟೆಲ್ಲ ನಡೆಯುತ್ತಿದ್ದರೂ ಮಿಸ್ಟರ್ ಪರಮೇಶ್ವರ ಏನ್ ಮಾಡ್ತಾ ಇದ್ದಾರೆ.ನಿಮ್ಮ ತನಿಖೆ ರೇವಣ್ಣ ಹಾಗೂ ಪ್ರಜ್ವಲ್ ಮೇಲೆ ಮಾತ್ರ ಯಾಕೆ ಟಾರ್ಗೆಟ್ ಆಗಿದೆ. ವಿಡಿಯೋ ಬಿಡುಗಡೆ ಮಾಡಿದವರನ್ನ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಗೃಹ ಸಚಿವರಿಗೆ ಪ್ರಶ್ನಿಸಿದ್ದಾರೆ.