ಬೆಂಗಳೂರು : ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಕೇಸ್ ಪ್ರತಿದಿನ ಒಂದೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ LR ಶಿವರಾಮೇಗೌಡ ಸ್ಪೋಟಕ ಹೇಳಿಕೆ ನೀಡಿದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ವಕೀಲ ದೇವರಾಜಗೌಡನೇ ನನ್ನ ದುಂಬಾಲು ಬಿದ್ದಿದ್ದನು ಎಂದು ತಿಳಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಗೂ ನನೆಗೂ ಸಂಭಂಧವಿಲ್ಲ. ದೇವರಾಜೇಗೌಡ ನನ್ನ ಹೆಸರು ಬಳಕೆ ಮಾಡಿದ್ದು ವಿಷಾದನೀಯ. ಏ.29 ಕ್ಕೆ ದೇವರಾಜೇಗೌಡನನ್ನು ನಾನು ಮೊದಲನೇ ಭೇಟಿಯಾಗಿದ್ದೇನೆ. ಅಲ್ಲಿ ತನಕ ಅವರನ್ನ ನಾನು ಭೇಟಿಯಾಗಿರಲಿಲ್ಲ. ಸ್ವತಃ ದೇವರಾಜೇಗೌಡ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸಿ ಎಂದು ನನ್ನ ಭೇಟಿಯಾಗಿದ್ದನು ಎಂದು ತಿಳಿಸಿದರು.
ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ನಾಯಕನೂ ಆಗಿರುವ ವಕೀಲ ದೇವರಾಜೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಅನ್ನು ಹಂಚಿಕೆ ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದರು. ಜೊತೆಗೆ, ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿದ್ದು, ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದು ಹೇಳಿದ್ದರು.