ಬೆಂಗಳೂರು : ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಅಪಹರಣ ಪ್ರಕರಣ ಸಂಬಂಧ ಎಸ್ ಐಟಿ ವಶದಲ್ಲಿರುವ ಹೆಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಮಹಿಳೆಯ ಮಗ ಇತ್ತೀಚಿಗೆ ನನ್ನ ತಾಯಿ ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ದೂರು ಸಲ್ಲಿಸಿದ್ದ. ಈ ಪ್ರಕರಣದಲ್ಲಿ HD ರೇವಣ್ಣ ಹಾಗೂ ಭವಾನಿ ರೇವಣ್ಣ ಸಂಬಂಧಿಯಾಗಿರುವ ಸತೀಶ್ ಬಾಬು ವಿರುದ್ಧ FIR ದಾಖಲಾಗಿತ್ತು.
ಪ್ರಕರಣದಲ್ಲಿ ಶಾಸಕ HD ರೇವಣ್ಣ ಅವರನ್ನು ಬಂಧಿಸಲಾಗಿತ್ತು.ಬಂಧನಕ್ಕೂ ಮುನ್ನ ಅವರು ನಿರೀಕ್ಷಣಾ ಜಾಮೀನನ್ನು ಸಲ್ಲಿಸಿದ್ದರು. ಆದರೆ ಅದನ್ನು ಕೋರ್ಟ್ ಅದನ್ನು ಮುಕ್ತಾಯಗೊಳಿಸಿದ್ದು ಇದೀಗ ಬಂಧನದಲ್ಲಿರುವ ರೇವಣ್ಣ ಅವರು ಮತ್ತೆ ಜಾಮೀನಿಗಾಗಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು,ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.