ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಎರಡನೇ ಹಂತದಲ್ಲಿ ಮತದಾನ ನಡೆದಿದ್ದು, ಈ ಬಾರಿ ಶೇಕಡಾವಾರು ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.ಕಳೆದ ಬಾರಿಯ ಚುನಾವಣೆಯಲ್ಲಿ ಶೇ.68.66ರಷ್ಟು ಮತದಾನ ಪ್ರಮಾಣವಾಗಿದ್ದರೆ, ಈ ಬಾರಿ 70.03 ಮತದಾನವಾಗಿದೆ.
ಮಂಗಳವಾರ ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನದಲ್ಲಿ ಘಟಾನುಘಟಿ ನಾಯಕರು ಸೇರಿ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದ ವೇಳೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ.
ಇಲ್ಲಿದೆ ಜಿಲ್ಲಾವಾರು ಮತದಾನದ ಮಾಹಿತಿ
ಚಿಕ್ಕೋಡಿ- ಶೇ.76.47ರಷ್ಟು
ಬೆಳಗಾವಿ- ಶೇ.71
ಬಾಗಲಕೋಟೆ-70.10
ವಿಜಯಪುರ-64.71
ರಾಯಚೂರು -61.81
ಬೀದರ್-ಶೇ.63. 55
ಕೊಪ್ಪಳ -69.87
ಬಳ್ಳಾರಿ-72. 35
ಹಾವೇರಿ – ಶೇ.74.75
ಧಾರವಾಡ – 72.12
ಉತ್ತರ ಕನ್ನಡ -73.52
ದಾವಣಗೆರೆ -76.23
ಶಿವಮೊಗ್ಗ-76.05
ಗುಲ್ಬರ್ಗ- ಶೇ.61.71 ರಷ್ಟು ಮತದಾನವಾಗಿದೆ