ಬೆಂಗಳೂರು: ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಿತು. ಇಂದಿನ ಲೋಕಸಭಾ ಚುನಾವಣೆಯ 2ನೇ ಹಂತದಲ್ಲಿ ಶೇ.69.30ರಷ್ಟು ಮತದಾನವಾಗಿದೆ ಎಂಬುದಾಗಿ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ.
ಈ ಕುರಿತಂತೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿರುವಂತ ಚುನಾವಣಾ ಆಯೋಗವು, ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದಂತ ಮತದಾನ ಪ್ರಕ್ರಿಯೆಯಲ್ಲಿ ಶೇ.69.37ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.
ಹೀಗಿದೆ ಜಿಲ್ಲಾವಾರು ಮತದಾನದ ಶೇಕಡಾವಾರು ವಿವರ
- ಬಾಗಲಕೋಟೆ – ಶೇ.70.43
- ಬೆಳಗಾವಿ- ಶೇ.70.84
- ಬಳ್ಳಾರಿ – ಶೇ.69.74
- ಬೀದರ್- ಶೇ.63.65
- ವಿಜಯಪುರ- ಶೇ.64.71
- ಚಿಕ್ಕೋಡಿ- ಶೇ.74.39
- ದಾವಣಗೆರೆ – ಶೇ.76.23
- ಧಾರವಾಡ – ಶೇ.71.29
- ಗುಲ್ಬರ್ಗಾ- ಶೇ.61.73
- ಹಾವೇರಿ- ಶೇ.72.59
- ಕೊಪ್ಪಳ- ಶೇ.69.87
- ರಾಯಚೂರು- ಶೇ.60.72
- ಶಿವಮೊಗ್ಗ- ಶೇ.76.05
- ಉತ್ತರ ಕನ್ನಡ- ಶೇ.73.52
ರಾಜ್ಯದ ‘108 ಸಿಬ್ಬಂದಿ ಮುಷ್ಕರ’ ವಾಪಾಸ್: ಎಂದಿನಂತೆ ಕೆಲಸಕ್ಕೆ ಹಾಜರ್