ದೊಡ್ಡಬಳ್ಳಾಪುರ : ರೆಸ್ಟೋರೆಂಟ್ ಜನರಲ್ ಲೈಸೆನ್ಸ್ ಸಲುವಾಗಿ ವ್ಯಕ್ತಿಯಿಂದ 3.5 ಲಕ್ಷ ಹಣವನ್ನು ಲಂಚ ಸ್ವೀಕರಿಸುತ್ತಿದ್ದ, ಗ್ರಾಮೀಣ ಅಭಿವೃದ್ಧಿ ಅಧಿಕಾರಿ (PDO) ಒಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಳಗೆ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ರೆಸ್ಟೋರೆಂಟ್ ಜನರಲ್ ಲೈಸೆನ್ಸ್ ಸಲುವಾಗಿ ಲಂಚ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕಚೇರಿ, ಅವರಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಅಧಿಕಾರಿ ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ನಿರಂಜನ್ ಅರಳು ಮಲ್ಲಿಗೆ ಗ್ರಾಮ ಪಂಚಾಯತಿ ಪಿಡಿಒ ಅಧಿಕಾರಿ ಎಂದು ತಿಳಿದುಬಂದಿದೆ.ಲೋಕಾಯುಕ್ತ ಎಸ್ಪಿ ಪ್ರವೀಣ್ ನೆಜ್ಜುರು ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದ್ದು, ಇದೀಗ ಪೊಲೀಸರು ನಿರಂಜನ್ ಅನ್ನು ಬಂಧಿಸಿದ್ದಾರೆ.