ಬೆಂಗಳೂರು : ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ, ಪೆನ್ ಡ್ರೈವ್ ನ ಕಥಾನಾಯಕರೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಗಂಭೀರವಾದ ಆರೋಪ ಮಾಡಿದರು.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕಥಾನಾಯಕರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರೇ ಇದರ ರೂವಾರಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇದರಲ್ಲಿ ಇನ್ನೊಬ್ಬರ ನಾಯಕರ ಆಡಿಯೋ ಸಹ ಇದೆ ದೇವರಾಜೇಗೌಡ ಮೇಲೆ ಕೆಸ್ ಹಾಕಲು ಈಗ ಹೊರಟಿದ್ದಾರೆ.ಡಿಸಿಎಂ ರವರು ಮಾತುಕತೆಗೆ ನನ್ನ ಬಳಿ ಕೆಲ ಜನರನ್ನು ಕಳುಹಿಸಿದ್ದರು.ಪೆನ್ ಡ್ರೈವ್ ಒಬ್ಬ ಮಹಾ ನಾಯಕನ ಬಳಿ ಹೋಗಿತ್ತು. ಡಿಕೆ ಮಾತಾಡಿರುವ ಆಡಿಯೋ ಬಿಡುಗಡೆ ಮಾಡಿದ ದೇವರಾಜ್ ಗೌಡ LR ಶಿವರಾಮೇಗೌಡ ಮೊದಲು ಮಾತನಾಡಿದರು ಆಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಫೋನ್ ಕೊಟ್ಟರು ಎಲ್ಲರ ಶಿವರಾಮೇಗೌಡರಿಂದ ಆಡಿಯೋದಲ್ಲಿ ಭರವಸೆ ನೀಡಿದರು ಎಂದು ಡಿಕೆ ಶಿವಕುಮಾರ್ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಡಿಕೆ ಕೈಗೆ ಎಲ್ ಆರ್ ಶಿವರಾಮೇಗೌಡ ಫೋನ್ ಕೊಟ್ಟರು ಇಷ್ಟನ್ನಾದರೂ ಮಾಡ್ತಿದ್ದೀವಲ್ಲ ಅದಕ್ಕಾದ್ರು ಖುಷಿಪಡಿ ಎಂದು ಡಿಕೆ ಶಿವಕುಮಾರ್ ಅಂದರು. ಆಡಿಯೋ ದಲ್ಲಿ ಯಾರೂ ಮಾತಾಡಿದ್ದಾರೆ ಗೊತ್ತಾಯಿತಲ್ಲವಾ? ಇದರಲ್ಲಿ ಯಾರ ಪಾತ್ರ ಇದೆ ಎಂದು ಗೊತ್ತಾಯಿತು ಅಲ್ವಾ? ನಾನು ಸಿ ಬಿ ಐ ಗೆ ದೂರು ಕೊಡುತ್ತೇನೆ ಎಸ್ ಐ ಟಿ ಮೇಲೆ ನಂಬಿಕೆ ಇಲ್ಲ ಎಂದರು.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಒಂದು ಬಿಡುಗಡೆಯಾಗಿರುವ ವಿಡಿಯೋಗಳನ್ನು, ಕೆಲ ಕಿಡಿಗೇಡಿ ರಾಜಕಾರಣಿಗಳು ವಿಡಿಯೋಗಳನ್ನು ಅಸ್ತ್ರ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ನೀಡಿದರು.ಈಗಾಗಲೇ ನಾನು ಎರಡು ಬಾರಿ ಎಸ್ಐಟಿ ಅಧಿಕಾರಿಗಳನ್ನು ಭೇಟಿಯಾಗಿದ್ದೇನೆ. ಅದರಲ್ಲಿ ಕೆಲ ಕಹಿ ಸತ್ಯಗಳನ್ನು ಕೂಡ ಹೇಳಿದ್ದೇನೆ ಎಂದರು.
ಸ್ಟೇ ಇದ್ದರೂ ವಿಡಿಯೋಗಳನ್ನು ಹಂಚಿದ್ದಾರೆ ಎಂದು ದೂರು ದಾಖಲಿಸಲಾಗಿದೆ ವಿಶೇಷ ಅಂದರೆ ವಿಡಿಯೋಗಳನ್ನು ಬ್ಲರ್ ಮಾಡದೆ ಹರಿಬಿಟ್ಟಿದ್ದಾರೆ ಎಂದರು.ಇದೆಲ್ಲರ ನಡುವೆ ಯಕ್ಷಪ್ರಶ್ನೆ ಏನೆಂದರೆ ದೇವರಾಜೆಗೌಡ ಪಾತ್ರ ಏನು ಎಂಬುದಾಗಿದೆ. ವಕೀಲ ವೃತ್ತಿಯ ನಿಯಮ ಏನಪ್ಪ ಅಂದರೆ ರಕ್ಷಣೆ ಕೊಡುವುದು ಕೊಲೆಗಾರ ಬಂದರು ಆತನಿಗೆ ರಕ್ಷಣೆ ಕೊಡಬೇಕಾಗಿರುವುದು ಕೆಲ ಕಿಡಿಗೇಡಿ ರಾಜಕಾರಣಿಗಳು ವಿಡಿಯೋವನ್ನು ಅಸ್ತ್ರ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.