ಹಾಸನ : ರಾಜಕೀಯ ದುರುದ್ದೇಶಕ್ಕಾಗಿ ಪೆನ್ ಡ್ರೈ ದುರ್ಬಳಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈ ಪ್ರಕರಣವನ್ನು ದುರುದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. ರೇವಣ್ಣ ಅವರು ಎಲ್ಲಿಯೂ ಅಡಗಿ ಕುಳಿತಿರಲಿಲ್ಲ. ವಿಚಾರಣೆಗೆ ಕರೆಯಬಹುದಾಗಿತ್ತು. ಆದರೆ ನೋಟಿಸ್ ನೀಡಿ ವಶಕ್ಕೆ ಪಡೆಯಬಾರದಾಗಿತ್ತು. ಪೆನ್ ಡ್ರೈವ್ ಪ್ರಕರಣದಲ್ಲಿ ಅವರನ್ನು ಬಂಧಿಸುವ ಅವಶ್ಯಕತೆ ಇರಲಿಲ್ಲ ಎಂದರು.
ಎಸ್ ಐಟಿ ತನಿಖೆ ದಾರಿ ದಿಕ್ಕು ತಪ್ಪುತ್ತಿದೆ. ಪೆನ್ ಡ್ರೈವ್ ಹರಿಬಿಟ್ಟವರನ್ನು ಪತ್ತೆ ಮಾಡುವ ಬದಲು ರೇವಣ್ಣರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.