ಕಾರವಾರ:ಸಿದ್ದಾಪುರ ತಾಲೂಕಿನ ಅರೆಂದೂರು ಗ್ರಾಮದ 5 ವರ್ಷದ ಬಾಲಕಿ ಕ್ಯಾಸನೂರು ಅರಣ್ಯ ರೋಗದಿಂದ (ಮಂಗನ ಜ್ವರ) ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ.
ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದು ಮೃತಪಟ್ಟಿದ್ದಾಳೆ.
ಕೆಎಫ್ ಡಿ ನಿಧಾನವಾಗಿ ತಾಲ್ಲೂಕಿನ ಹೊಸ ಪ್ರದೇಶಗಳಿಗೆ ಹರಡುತ್ತಿದೆ.