ಬೆಂಗಳೂರು : ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ A2 ಆರೋಪಿಯಾಗಿರುವ ಸತೀಶ್ ಬಾಬು ಕಿಡ್ನಾಪ್ ಮಾಡಿಸಿದ್ದು ರೇವಣ್ಣನೇ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ರೇವಣ್ಣ ಹೇಳಿದ್ದಕ್ಕೆ ಮಹಿಳೆ ಕರೆದೊಯ್ದು ಬಿಟ್ಟು ಬಂದಿದ್ದೆ ಎಂದು ಎಸ್‌ಐಟಿ ಮುಂದೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನನ್ನ ತಾಯಿ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಅಪಹರಣಕ್ಕೆ ಒಳಗಾದ ಮಹಿಳೆಯ ಆ ಮಗ ಮೈಸೂರಿನ ಕೆ ಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದ ಈ ಹಿನ್ನೆಲೆಯಲ್ಲಿ ಪೊಲೀಸರು A1 ಆರೋಪಿ HD ರೇವಣ್ಣ ಹಾಗೂ A 2 ಆರೋಪಿಯಾಗಿ ಭವಾನಿ ರೇವಣ್ಣ ಸಂಬಂಧಿಯಾಗಿರುವ ಸತೀಶ್ ಬಾಬು ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.
ಈ ನೆಲೆಯಲ್ಲಿ ನಿನ್ನೆ ಎಸ್ಐಟಿ ಅಧಿಕಾರಿಗಳು ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆಯ ವೇಳೆ ಎಚ್ ಡಿ ರೇವಣ್ಣ ಅವರು ಕಿಡ್ನ್ಯಾಪು ನನಗೂ ಯಾವುದೇ ರೀತಿಯಾದ ಸಂಬಂಧ ಇಲ್ಲ ಎಂದು ಹೇಳಿಕೆನು ನೀಡಿದರು ಇದೀಗ ಸತೀಶ್ ಬಾಬು ನೀಡಿರುವ ಹೇಳಿಕೆಯಿಂದ ಎಚ್ ಡಿ ರೇವಣ್ಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರು ಆಗಲಿದೆ ಎಂದು ಹೇಳಲಾಗುತ್ತಿದೆ.