ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕಾರಕ್ಕೆ ಸಂಬಂಧಿಸಿದಂತೆ HD ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ಧ ಇದೀಗ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಇದೀಗ, ತಂದೆ ಹಾಗೂ ಮಗನ ವಿರುದ್ಧ ಸುಮಾರು 700 ಗಣ್ಯರಿಂದ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹೌದು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು
ದೇಶದ ಹಲವು ಮಹಿಳಾ ಸಂಘಟನೆಗಳು, ವಿವಿಧ ವೃತ್ತಿಯ ಮಹಿಳೆಯರು ಸೇರಿದಂತೆ 700 ಗಣ್ಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಬಹುತ್ವ ಕರ್ನಾಟಕದ ನಿಶಾ ಅಬ್ದುಲ್ಲಾ, ಕರ್ನಾಟಕ ಜನ ಶಕ್ತಿಯ ಲಲಿತಾ, ಅಖಿಲ ಭಾರತ ಸ್ತ್ರೀವಾದಿ ಒಕ್ಕೂಟ, ವುಮೆನ್ ಫಾರ್ ಡೆಮಾಕ್ರಸಿ ಸಂಘಟನೆಯ ಪದಾಧಿಕಾರಿಗಳು ಸೇರಿ ವಿವಿಧ ವೃತ್ತಿಯಲ್ಲಿರುವ ಹಲವು ಮಹಿಳೆಯರು, ಗಣ್ಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.ಸುಮಾರು 2,976 ವಿಡಿ ಯೋಗಳಿವೆ ಎನ್ನಲಾಗುತ್ತಿದೆ ಇಷ್ಟಾದರೂ ಆಯೋಗ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.