ಬೆಂಗಳೂರು : ವರ್ಷವಿಡೀ ಕೆಲಸ ಮಾಡುವ, ಅಸಂಘಟಿತ ವಲಯದ ಕಾರ್ಮಿಕರ ವ್ಯಾಪ್ತಿಯಲ್ಲಿನ ವಾಹನ ಚಾಲಕರ ಶ್ರಮಕ್ಕೆ ಗೌರವ ಸಲ್ಲಿಸಲು ಅಪಘಾತ ರಹಿತ ಚಾಲನೆ ಮಾಡಿದ ಚಾಲಕರನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಜತೆಗೆ ‘ಚಾಲಕರ ದಿನ’ವನ್ನು ಆಚರಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ.
ಹೌದು ಚಲನಚಿತ್ರ ನಟ ಶಂಕರ್ ನಾಗ್ ಅವರ ಜನ್ಮದಿನದಂದು ಈ ಒಂದು ದಿನಾಚರಣೆಯ ಆಚರಿಸಬೇಕು ಎಂದು ಚಾಲಕರ ಒತ್ತಾಯವಾಗಿದ್ದು, ಈ ಕುರಿತಂತೆ ಸಾರಿಗೆ ಇಲಾಖೆಚರ್ಚಿಸಿ ನಿರ್ಧಾರ ಕೈಗೊಳ್ಳಲ್ಲಿದೆ ಎಂದು ಹೇಳಲಾಗುತ್ತಿದೆ. ಕಳೆದವರ್ಷವಿವಿಧಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಒಕ್ಕೂಟದ ವಿವಿಧ ಸಂಘಟನೆಗಳು ಪ್ರತಿಭಟಿಸಿದ ಸಂದರ್ಭದಲ್ಲಿ ಚಾಲಕರ ಶ್ರಮವನ್ನು ಗುರುತಿಸಿ, ಗೌರವಿಸುವ ಸಲುವಾಗಿ ಚಾಲಕರ ದಿನವನ್ನು ಆಚರಿಸಬೇಕು ಎಂಬ ಬೇಡಿಕೆಯನ್ನೂ ಇಡಲಾಗಿತ್ತು.
ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಸರ್ಕಾರ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಚಾಲಕರ ದಿನವನ್ನು ಯಾವಾಗ? ಯಾವ ರೀತಿಯಲ್ಲಿ ಆಚರಿಸಬೇಕು ಎಂಬುದರ ಬಗ್ಗೆ ಇಲಾಖೆ ನಿರ್ಧರಿಸಲಿದೆ.
ಚಾಲಕರ ದಿನದಂದು ಪ್ರಶಸ್ತಿ:
ಕಾಟಾಚಾರಕ್ಕೆ ಚಾಲಕರದಿನವನ್ನು ಆಚರಿಸುವ ಬದಲು ಅದನ್ನು ಅರ್ಥಪೂರ್ಣ ವಾಗಿಸಲು ಚಾಲಕರಿಗೆ ಪ್ರೇರಣೆ ಸಿಗುವಂತೆ ಮಾಡುವುದು ಸಾರಿಗೆ ಇಲಾಖೆ ಉದ್ದೇಶವಾಗಿದೆ. ಅದಕ್ಕಾಗಿ ಯೋಜನೆಗ ಳನ್ನು ರೂಪಿಸಲಾಗುತ್ತಿದ್ದು, 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷ ಚಾಲನಾ ವೃತ್ತಿಯಲ್ಲಿ ತೊಡಗಿಕೊಂಡಿರುವ, ಸಾರಿಗೆ ಇಲಾಖೆಯಿಂದ ಪಡೆಯುವ ಎಲ್ಲ ದಾಖಲೆಗಳನ್ನು ಪಡೆದಿ ರುವ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಅಪಘಾತ ರಹಿತ ಚಾಲನೆ ಮಾಡಿರುವ ಚಾಲಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.