ಬೆಂಗಳೂರು: ಹಾಸನ ಸಂಸದ ಪ್ರಜ್ಬಲ್ ರೇವಣ್ಣ ವಿರುದ್ದ ಎಸ್ಐಟಿ ತಂಡ ತನಿಖೆಯನ್ನು ಭರದಿಂದ ನಡೆಸ್ತಿದೆ. ಈ ನಡುವೆ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಶಾಸಕ ಹೆಚ್.ಡಿ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶವನ್ನು ಇಂದು ನೀಡಿದೆ. ಇನ್ನೂ ಯಾವುದೇ ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗ ರೇವಣ್ಣ ವಿಚಾರಣೆಗೆ ಹಾಜರಾಗದೇ ಇದ್ದರೇ ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.
ಅರ್ಜಿ ವಿಚಾರಣೆ ವೇಳೆ ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ ನಾಯ್ಕ್ ವಾದ ಮಂಡಿಸಿ, ಪೊಲೀಸರು ಬಂಧಿಸುವ ಸಾಧ್ಯತೆ ಇದ್ದು, ಅವರನ್ನು ಬಂಧಿಸಿದಂತೆ ಮನವಿ ಮಾಡಿ ತನಿಖೆಗೆ ರೇವಣ್ಣ ಸಹಕರಿಸುವುದಾಗಿ ತಿಳಿಸಿದ್ದರು. ಈ ನಡುವೆ ಎಸ್ ಪಿಸಿ ಜಗದೀಶ್ ಅವರು ಕೂಡ ನ್ಯಾಯಾಧೀಶರ ಮುಂದೆ ರೀಕ್ಷಣಾ ಜಾಮೀನು ನೀಡಬಾರದು ಇದು ಗಂಭೀರವಾದ ಪ್ರಕರಣ. ಬಂಧನ ಮಾಡಿ ತನಿಖೆ ಮಾಡುವ ಅವಶ್ಯಕತೆ ಇರುವುದನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.ಈ ನಡುವೆ ದ ಪ್ರತಿ ವಾದ ಆಲಿಸಿ ನ್ಯಾಯಾಧೀಶ ತೀರ್ಪುನ್ನು ಕಾಯ್ದಿರಿಸಿದ್ದರು, ಅದರಂತೆ ಈಗ ನ್ಯಾಯಾಲಯವು ಆದೇಶವನ್ನು ನೀಡಿದ್ದು, ಅದರಂತೆ ರೇವಣ್ಣ ‘ನಿರೀಕ್ಷಣಾ ಜಾಮೀನು’ ಅರ್ಜಿ ವಜಾ ಮಾಡಲಾಗಿದೆ ಅಂತ ತಿಳಿದು ಬಂದಿದೆ.