ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆ ಸರ್ಕಾರ ಈ ಒಂದು ಪ್ರಕರಣವನ್ನು ಎಸ್ ಐ ಟಿ ಗೆ ವಹಿಸಿತ್ತು. ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದ ತಕ್ಷಣ ನಿನ್ನೆ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ನಿವಾಸಕ್ಕೆ ಬೀಗ ಹಾಕಲಾಗಿತ್ತು.
ಎಸ್ಐಟಿ ಅಧಿಕಾರಿಗಳು ಸಂಸದರ ನಿವಾಸಕ್ಕೆ ಬಂದು ಸ್ಥಳ ಮಹಜರು ನಡೆಸಲಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ ಸಂಸದರ ನಿವಾಸಕ್ಕೆ ನಿನ್ನೆ ಬೀಗ ಹಾಕಲಾಗಿತ್ತು.ಆದರೆ ಸ್ಥಳೀಯ ಪೊಲೀಸರು, ಸಂಸದರ ನಿವಾಸದ ಕೀಯನ್ನು ಇದೀಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಪಿಎ ಬಳಿ ಇದ್ದ ಕೀಯನ್ನು ಇದೀಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೀಗ ಪ್ರಕರಣ ದಾಖಲಾಗುತ್ತಿದ್ದಂತೆ ಹಾಸನ ಪೊಲೀಸರು ಇದೀಗ ಪಿಎ ಬಳಿಕ ಪಡೆದುಕೊಂಡಿದ್ದಾರೆ.ಕೆಲವೇ ಹೊತ್ತಿನಲ್ಲಿ ಸಂಸದರ ನಿವಾಸಕ್ಕೆ ಎಸ್ಐಟಿ ತಂಡ ಎಂಟ್ರಿ ಕೊಡುವ ಸಾಧ್ಯತೆ ಇದೆ ಸಂತ್ರಸ್ತ ಮಹಿಳೆಯನ್ನು ಕರೆತಂದು ಸಂಸದರ ನಿವಾಸದಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.