ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದಂತೆ ನಿನ್ನೆ ಪೊಲೀಸರು ರೇವಣ್ಣ ಸಂಬಂಧಿ A2 ಆರೋಪಿ ಸತೀಶ್ ಬಾಪುನನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಸತೀಶ್ ಬಾಬುನನ್ನು ಕಸ್ಟಡಿಗೆ ನೀಡಿ ಎಂದು ಅರ್ಜಿ ಸಲ್ಲಿಸಿದೆ.
ಹೌದು ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸತೀಶ್ ಬಾಬು ಕಸ್ಟಡಿ ಅಗತ್ಯವಿದೆ.ಹೆಚ್ಚಿನ ವಿಚಾರಣೆ ನಡೆಸಲು ಸತೀಶ್ ಬಾಬು ಕಸ್ಟಡಿ ಅಗತ್ಯವಿದೆ. ಹಾಗಾಗಿ ಕಸ್ಟಡಿಗೆ ನೀಡಲು ಇದೀಗ SIT ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಎಸ್ಐಟಿ ಪರ ಎಸ್ ಪಿ ಪಿ ಜಗದೀಶ್ ರಿಂದ ಮನವಿ ಸಲ್ಲಿಕೆಯಾಗಿದೆ. ಸದ್ಯ ಆರೋಪಿ ಸತೀಶ್ ಬಾಬು ಈಗಾಗಲೇ 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇವಣ್ಣ ಸತೀಶ್ ಬಾಬು ವಿರುದ್ಧ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾರಣಕ್ಕೆ ಒಳಗಾದ ಮಹಿಳೆಯ ಮಗ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ.