ಹುಬ್ಬಳ್ಳಿ : ಸರ್ಕಾರ ನೇಹಾ ಹತ್ಯೆ ಪ್ರಕರಣವನ್ನು ವೈಯಕ್ತಿಕ ವಿಚಾರ ಅಂತ ಹೇಳಿತ್ತು. ಆದರೆ ಇದೀಗ ಹುಬ್ಬಳ್ಳಿಯಲ್ಲಿ ನಿನ್ನೆ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿದೆ. ಇದನ್ನು ವೈಯಕ್ತಿಕ ಎಂದು ಹೇಳಬಾರದು.ಹಾಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಬೇಕು ಎಂದು ಬಿಜೆಪಿಯ ಮಾಜಿ ಸಚಿವ ಸಿ ಟಿ ರವಿ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಿನ್ನೆ ಮತ್ತೊಂದು ಲವ್ ಜಿಹಾದ್ ಕೇಸ್ ನಡೆದಿದೆ. ಧಾರವಾಡದಲ್ಲಿ ಒಂದುವರೆ ತಿಂಗಳಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ. ನೇಹ ಹಿರೇಮಠ ಹತ್ಯೆಯಾದಾಗ ಅದು ವೈಯಕ್ತಿಕ ಹತ್ಯೆ ಎಂದರು. ಈ ಪ್ರಕರಣ ವೈಯಕ್ತಿಕ ಎಂದು ಹೇಳಬಾರದು ಎಂದು ತಿಳಿಸಿದರು.
ಲವ್ ಜಿಹಾದ್ ಕೇಸ್ ತನಿಖೆಗೆ ವಿಶೇಷ ತಂಡ ರಚನೆ ಮಾಡಿ.ಕೇರಳ ಕೋರ್ಟ್ ಲವ್ ಜಿಹಾದ್ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಅಮಾಯಕ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಲಾಗಿದೆ ಲವ್ ಜಾಬ್ ಕೇಸ್ ತನಿಖೆ ಮಾಡಲು ಎಸ್ಐಟಿ ರಚನೆ ಮಾಡಿ ಅದು ಹುಬ್ಬಳ್ಳಿಯಲ್ಲಿ ಬಿಜೆಪಿ ಮಾರಿ ಶಾಸಕ ಸಿಟಿ ರವಿ ಆಗ್ರಹಿಸಿದರು.