ಬೆಂಗಳೂರು : ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಝಿ ಸಚಿವ ಹೆಚ್.ಡಿ .ರೇವಣ್ಣ ಅವರು ವಿದೇಶಕ್ಕೆ ಪರಾರಿಯಾಗುವ ಅನುಮಾನದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವು ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
ಹಾಸನ ಸಂಸದ ಪ್ರಜ್ವಲ್ ಬಳಿಕ ತಂದೆ ಮಾಜಿ ಸಚಿವ ಹೆಚ್ಡಿ ರೇವಣ್ಣಗೂ ವಿಶೇಷ ತನಿಖಾದಳ ಲುಕ್ಔಟ್ ನೋಟಿಸ್ ನೀಡಿದೆ. ದೇಶ ತೊರೆಯುವ ಸಾಧ್ಯತೆ ಇರೋ ಹಿನ್ನೆಲೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ ಎನ್ನಲಾಗಿದೆ. ಮೈಸೂರಿನ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಲುಕ್ಔಟ್ ನೋಟಿಸ್ ನೀಡಲಾಗಿದೆ.
ಮಹಿಳೆ ಅಪಹರಣ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಮೇ.೨ ರ ರಾತ್ರಿ ಎಫ್ ಐಆರ್ ದಾಖಲಾಗಿದೆ. ದೂರುದಾರರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಸತೀಶ್ ಬಾಬು ಎಂಬುವರ ಮೇಲೆ ಅಪಹರಣದ ಆರೋಪ ಮಾಡಿದ್ದಾರೆ. ನಾಪತ್ತೆಯಾಗಿರುವ ಮಹಿಳೆಗೆ ಜೀವ ಬೆದರಿಕೆ ಇರುವ ಬಗ್ಗೆಯೂ ದೂರುದಾರರು ತಿಳಿಸಿದ್ದಾರೆ.
ಲುಕ್ ಔಟ್ ನೋಟಿಸ್ ಎಂದರೇನು?
ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಜಾರಿಗೊಳಿಸಲಾಗುವ ವಿಶೇಷವಾದ ನೋಟಿಸ್ ಇದು. ಇದನ್ನು ಲುಕ್ ಔಟ್ ಸರ್ಕ್ಯೂಲರ್ (LOC) ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ವಿದೇಶಾಂಗ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್ ಇಮಿಗ್ರೇಷನ್ (BoI) ಜಾರಿಗೊಳಿಸುತ್ತದೆ.