ಬೆಂಗಳೂರು: ಬಿರು ಬಿಸಿನಿಂದ ಕಂಗೆಟ್ಟಿದ್ದಂತ ಸಿಲಿಕಾನ್ ಸಿಟಿಯಲ್ಲಿ ಇದೀಗ ವರುಣಾಗಮನವಾಗಿದೆ. ಗುಡುಗು ಸಹಿತ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ.
ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಕೆಲ ಪ್ರದೇಶಗಳಲ್ಲಿ ಮಳೆಯಾಗಿತ್ತು. ಇಂದು ಮತ್ತೆ ಮಳೆ ಆರಂಭಗೊಂಡಿದೆ. ಬೆಂಗಳೂರಿನ ಕೇಂದ್ರ ಸ್ಥಾನವಾಗಿರುವಂತ ಮೆಜೆಸ್ಟಿಕ್ ಸುತ್ತಾಮುತ್ತ ಗುಡುಗು ಸಹಿತ ಮಳೆ ಸುರಿಯುತ್ತಿದೆ.
ರೇಸ್ ಕೋರ್ಸ್, ಶಿವಾನಂದ ಸರ್ಕಲ್, ಚಾಲುಕ್ಯ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಮಾರ್ಕೆಟ್, ಹೊಸಕೇಟೆ, ಕೆ ಆರ್ ಪುರಂ, ವೈಟ್ ಫೀಲ್ಡ್ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.
ದಿಢೀರ್ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರಾಜಧಾನಿ ಜನತೆಯನ್ನು ತಂಪು ಮಾಡಿದ್ದರೇ, ವಾಹನ ಸವಾರರು ರಸ್ತೆಯಲ್ಲಿ ನೀರು ಹರಿದು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲ ಗಂಟೆಯಿಂದ ಮಳೆಯಾಗುತ್ತಿದ್ದು, ಗುಡುಗು ಸಹಿತ ಧಾರಾಕಾರ ಮಳೆ ಬೆಂಗಳೂರಿನ ವಿವಿಧೆಡೆಯಾಗುತ್ತಿದೆ. ಈ ಮೂಲಕ ಬಿಸಿನಿಂದ ತತ್ತರಿಸಿದ್ದಂತ ಬೆಂಗಳೂರು ಜನತೆಗೆ ವರುಣ ತಂಪೆರೆದಿದ್ದಾನೆ.
ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ‘CBI’ ಗೆ ವಹಿಸಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹ
BREAKING : ಲೋಕಸಭಾ ಚುನಾವಣೆ : ರಾಯ್ ಬರೇಲಿ ಕ್ಷೇತ್ರದಿಂದ ‘ರಾಹುಲ್ ಗಾಂಧಿ’ ನಾಮಪತ್ರ ಸಲ್ಲಿಕೆ