ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಎಸ್ಐಟಿ ವಿಚಾರಣೆ ಎರಡು ಬಾರಿ ನೋಟಿಸ್ ನೀಡಿದೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಅವರಿಗೂ ಕೂಡ ಎಸ್ಐಟಿ ನೋಟಿಸ್ ನೀಡಿದೆ.
ಹೌದು ಸ್ಥಳೀಯ ಪೊಲೀಸರಿಂದ ಆ ಭವಾನಿ ರೇವಣ್ಣಗೆ ಎಸ್ಐಟಿ ನೋಟಿಸ್ ನೀಡಿದ್ದು, ಇಂದು ಅಥವಾ ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ರೇವಣ್ಣ ಮನೆಗೆ ನೋಟಿಸ್ ನೀಡಿ ಹೋಗಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದು, ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ.
ಹಾಗಾಗಿ ಇಂದು ಸ್ಥಳೀಯ ಪೊಲೀಸರು ಎಸ್ ಡಿ ರೇವಣ್ಣ ಅವರ ಮನೆಗೆ ಭೇಟಿ ನೀಡಿದ್ದು, ಹಳೆ ನರಸೀಪುರದಲ್ಲಿರುವ ಶಾಸಕ ಎಚ್ ಡಿ ರೇವಣ್ಣ ನಿವಾಸಕ್ಕೆ ನಗರ ಠಾಣೆ ಪಿಎಸ್ಐ ಅವರು ಭೇಟಿ ನೀಡಿದ್ದು, ಇಂದು ಅಥವಾ ನಾಳೆ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
3ನೇ ನೋಟಿಸ್ ನೀಡಲು SIT ಸಿದ್ಧತೆ
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಈಗಾಗಲೇ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಶಾಸಕ ಎಸ್ಡಿ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದೆ. ಆದರೂ ಕೂಡ ಅವರಿಬ್ಬರೂ ಇದುವರೆಗೂ ಎಸ್ಐಟಿ ವಿಚಾರಣೆಗೆ ಹಾಜರಾಗಿಲ್ಲ.
ಎರಡು ಬಾರಿ ನೋಟಿಸ್ ನೀಡಿದರು ಕೂಡ, ರೇವಣ್ಣ ಹಾಗೂ ಪ್ರಜ್ವಲ್ ಡೋಂಟ್ ಕೇರ್ ಎಂದ್ದಿದ್ದಾರೆ. 2 ನೋಟಿಸ್ ನೀಡಿದರು ಕೂಡ ಇಬ್ಬರು ವಿಚಾರಣೆಗೆ ಬಂದಿಲ್ಲ.ಇನ್ನು ವಿಚಾರಣೆಗೆ ರೇವಣ್ಣ ಹಾಗೂ ಪ್ರಜ್ವಲ್ ಹಾಜರಾಗಿಲ್ಲ. ಹಾಗಾಗಿ ಮೂರನೇ ನೋಟಿಸ್ ನೀಡಲು ಇದೀಗ ಎಸ್ ಐ ಟಿ ತಯಾರಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ.