ಕೊಪ್ಪಳ : ಪ್ರಜ್ವಲ್ ರೇವಣ್ಣ ಕಾರು ಚಾಲಕ ಕಾರ್ತಿಕ್ ಅನ್ನು ಮಲೇಶಿಯಾ ಗೆ ಕಳುಹಿಸಿದ್ದು ಆಡಿಶನ್ ಡಿಕೆ ಶಿವಕುಮಾರ್ ಎಂದು ಪರೋಕ್ಷವಾಗಿ ಹೆಚ್‍ಡಿ ಕುಮಾರಸ್ವಾಮಿ ಆರೋಪ ಮಾಡಿದರು ಇವರ ಹೇಳಿಕೆಗೆ ಕಿಡಿ ಕಾರಿದ ಡಿಕೆ ಶಿವಕುಮಾರ್ ನನಗೇನೂ ತಲೆಕೆಟ್ಟಿದೆಯಾ? ರೋಡ್ನಲ್ಲಿ ನಿಂತು ಫೈಟ್ ಮಾಡೋವ್ನು ನಾನು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದಾ ನಮ್ ಬ್ರದರ್ ಹೇಳಿದ್ರಾ, ಅಚ್ಚ ಅಚ್ಚ ನಮ್ಮ ಎಲ್ಲಾ ಇನ್ಫಾರ್ಮಶನ್ ಗೊತ್ತಿರಬೇಕಲ್ಲವಾ? ಸೆಂಟ್ರಲ್ ನಿಂದ ತಗೊಳ್ಳಿ, ಯಾರ್ಯಾರು ಕಳಿಸಿದ್ದಾರೆ ಅಂತ ಎಂದು ಕೊಪ್ಪಳದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ನನಗೇನು ತಲೆ ಕೆಟ್ಟಿದ್ಯಾ, ರೋಡಲ್ಲಿ ಫೈಟ್ ಮಾಡ್ತೀನಿ ಹಿಂದಕ್ಕೆ ಯಾರನ್ನು ಕಳಿಸಿ ಎತ್ತಿ ತೋಟದಲ್ಲಿಟ್ಟು ನನಗೆ ಅವಶ್ಯಕತೆ ಇಲ್ಲ ಅವರಿಗೆ ಅವಶ್ಯಕತೆ ಇದೆ.
ನಮ್ಮ ಬ್ರದರ್ ಹಾಗೆ ಹೇಳಿದ್ದಾರಾ ಹಾಗಾದ್ರೆ ಅವರಿಗೆ ಎಲ್ಲಾ ಮಾಹಿತಿ ಗೊತ್ತಿರಬೇಕಲ್ಲ ಅವರು ತೋಟದ ಮನೆಯಲ್ಲಿ ಏನೇನೋ ಮಾಡಬಹುದು ಎಂದು ತಿರುಗೇಟು ನೀಡಿದರು.
ವಿಜಯೇಂದ್ರ ತಮ್ಮ ಪಕ್ಷದ ಎಲ್ಲ ನಾಯಕರನ್ನು ಹಾಸನಕ್ಕೆ ಕರೆದುಕೊಂಡು ಹೋಗಬೇಕು. ಹೆಣ್ಣು ಮಕ್ಕಳ ಬಗ್ಗೆ ಗೌರವವಿರುವ ಅವರು ಹೋಗಿ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ಹೇಳಲಿ.HD ದೇವೇಗೌಡ ಹಾಗೂ HD ಕುಮಾರಸ್ವಾಮಿ ಕೂಡ ಹೋಗಲಿ ಎಂದು ತಿಳಿಸಿದರು.