ಕಲಬುರ್ಗಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಬುರ್ಗಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಅಶ್ಲೀಲ ವಿಡಿಯೋ ತೋರಿಸಿ ರಾಜಕೀಯ ಮಾಡುವ ಅವಶ್ಯಕತೆ ನನಗೆ ಇಲ್ಲ ಎಂದು ತಿಳಿಸಿದರು.
ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ವಿಡಿಯೋ ತೋರಿಸಿ ರಾಜಕೀಯ ಮಾಡುವ ಅವಶ್ಯಕತೆ ನನಗೆ ಇಲ್ಲ. ನಾನು ಏನೇ ಇದ್ದರೂ ನೇರಾ ನೇರವಾಗಿ ಹೋರಾಟ ಮಾಡುವಂಥವನು. ಇಂತಹ ಚೀಪ್ ಕೆಲಸ ಮಾಡುವವನು ನಾನಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆಗೆ ತಿರುಗೇಟು ನೀಡಿದರು.
ಸಂತ್ರಸ್ತ ಮಹಿಳೆಯರನ್ನು ಜೆಡಿಎಸ್ ಬಿಜೆಪಿ ನಾಯಕರು ಭೇಟಿಯಾಗಲಿ.ಜೆಡಿಎಸ್ ಬಿಜೆಪಿಗೆ ಇಬ್ಬರು ಒಂದಾಗಿದ್ದಾರೆ ಅಲ್ಲವಾ? ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಡಿವಿ ಸದಾನಂದ ಗೌಡ, ಸುನಿಲ್ ಕುಮಾರ್, ಸಿಟಿ ರವಿ ಸೇರಿದಂತೆ ಎರಡು ಪಕ್ಷಗಳ ನಾಯಕರು ಹಾಸನಕ್ಕೆ ಹೋಗಲಿ ಸಂತ್ರಸ್ತ ಮಹಿಳೆಯರನ್ನು ಭೇಟಿಯಾಗಿ ಧೈರ್ಯವನ್ನು ತುಂಬವ ಕೆಲಸ ಮಾಡಲಿ ಎಂದು ಕಲಬುರ್ಗಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.