ಹಾವೇರಿ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ರಾಷ್ಟ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ಒಪ್ಪಿಸಿದರು ಕೂಡ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ತನಿಖಾದಳ ತನಿಖೆ ಮಾಡಿದರು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದು ಪ್ರಜ್ವಲ್ಗೆ ಒಂದೇ ದಿನದಲ್ಲಿ ವೀಸಾ ಹೇಗೆ ಸಿಕ್ಕಿತು ಎಂಬ ವಿನಯ್ ಕುಲಕರ್ಣಿ ಹೇಳಿಕೆಗೆ ಪ್ರತಿಕ್ರಿಸಿದ ಅವರು ತಿರುಗೇಟು ನೀಡಿದ್ದಾರೆ.
ವೀಸಾ ಹೇಗೆ ಸಿಕ್ಕಿತು ಅಂತ ಕೇಳಿದರೆ ಹೇಗೆ ಒಂದೇ ದಿನದಲ್ಲಿ ಸಿಗುತ್ತೆ. ಅವರು ವೀಸಾಗೆ ಅಪ್ಲೈ ಮಾಡಿದ್ದು ಸಿಕ್ಕಿದ್ದು ಇವರು ನೋಡಿದ್ದಾರಾ? ಪ್ರಜ್ವಲ್ ಯಾವಾಗ ವೀಸಾಗಿ ಅರ್ಜಿ ಹಾಕಿದ್ದಾರೆಂದು ಇವರಿಗೆ ಗೊತ್ತಾ? ವೀಸಾ ಕೊಡೋದು ಕೇಂದ್ರ ಸರ್ಕಾರವಲ್ಲ ಜರ್ಮನಿ ಸರ್ಕಾರ. ಕಾಮನ್ ಸೆನ್ಸ್ ಇರಬೇಕು ಅಷ್ಟು ಗೊತ್ತಿಲ್ಲವೇ ಎಂದು ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.