ಯಾದಗಿರಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್. ಡಿ ಕುಮಾರಸ್ವಾಮಿ ಇದರ ಹಿಂದೆ ಮಹಾನಾಯಕನ ಕೈವಾಡ ಇದೆ ಎಂದು ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು ರಾಜಕೀಯ ಮಾಡುವುದಾಗಿದ್ರೆ ಏನು ಬೇಕಾದರೂ ಮಾಡುತ್ತಿದ್ದಿವಿ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಯಾರ್ಯಾರನ್ನು ಭೇಟಿಯಾಗಿದ್ದಾರೆ ಎಂದು ಗೊತ್ತಿದೆ.ಮುಂಚಿತವಾಗಿಯೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು.ರಾಜಕೀಯ ಮಾಡೋದಾದರೆ ಏನು ಬೇಕಾದರೂ ಮಾಡುತ್ತಿದ್ವಿ. ನಾನು ಏನು ಮಾಡಬೇಕು ಅನ್ನೋದು ನನಗೂ ಗೊತ್ತಿದೆ. ಎಚ್ ಡಿ ಕುಮಾರಸ್ವಾಮಿ ಮಹಾನಾಯಕ ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಕುಮಾರಸ್ವಾಮಿಯವರು ನಾರಿ ಶಕ್ತಿ ಬಗ್ಗೆ ತಂದೆ ತಾಯಿ ಬಗ್ಗೆ ಬಹಳ ಗೌರವಿದೆ. ಹೆಣ್ಣುಮಕ್ಕಳಿಗೆ ಗೌರವ ಇದೆ ಅಂತ ಹೇಳುತ್ತಾರಲ್ಲ. ಹಾಗಾದರೆ ಮೊದಲು ಹೋಗಿ ಆ ತಾಯಂದಿರಿಗೆ ಧೈರ್ಯ ಹೇಳುವ ಹಾಗೂ ಸಾಂತ್ವನ ತುಂಬುವಂತ ಕೆಲಸವನ್ನು ಬಿಜೆಪಿಯವರು ಹಾಗೂ ಜನತಾದಳದವರು ಮಾಡಲಿ.ಇನ್ನೂ ಮಹಾನಾಯಕ ಎಂದು HD ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಯಾವ ನಾಯಕ ಅಂತಾದರೂ ಹೇಳಲಿ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ ನಾನು ಎಂದು ಡಿಕೆ ಶಿವಕುಮಾರ ತಿರುಗೇಟು ನೀಡಿದರು.