ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಹೌದು, ರಾಜ್ಯದಲ್ಲಿ ಈವರೆಗೆ ೪೯ ಮಂದಿಗೆ ಕಾಲರಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ೪೧ ಮಂದಿಗೆ ಕಾಲರಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಾಲರಾ ಸೋಂಕು ಬರಲು ಕಲುಷಿತ ನೀರು, ಆಹಾರ ಕಾರಣವಾಗಿದ್ದು, ನೀರಿನಲ್ಲಿ ಹೊಸ ಬ್ಯಾಕ್ಟಿರಿಯಾ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಕುಡಿಯು ನೀರಿನ ಮೂಲಗಳ ಶುದ್ಧತೆ ಪರಿಶೀಲನೆ ಮಾಡಲಾಗುತ್ತದೆ. ವಾಂತಿ, ಭೇದಿ ಕಾಲರಾ ರೋಗದ ಲಕ್ಷಣವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ವೈದ್ಯರೊಬ್ಬರ ಹೇಳಿಕೆ ಪ್ರಕಾರ ಕಳೆದ ಕೆಲವು ದಿನಗಳಿಂದ ಕಾಲರಾ ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ. ಇದು ಕಳವಳಕಾರಿಯಾಗಿದೆ ಮತ್ತು ಈ ಏರಿಕೆಗೆ ಅನೇಕ ಅಂಶಗಳು ಕಾರಣವಾಗಬಹುದು. ಕಳಪೆ ನೈರ್ಮಲ್ಯ ಮತ್ತು ಕಲುಷಿತ ನೀರಿನ ಮೂಲಗಳು ಈ ಉಲ್ಬಣಕ್ಕೆ ಕಾರಣಗಳಾಗಿವೆ. ಇದಲ್ಲದೆ, ಕಿಕ್ಕಿರಿದ ಜೀವನ ಪರಿಸ್ಥಿತಿಗಳು ಮತ್ತು ನೀರು ಮತ್ತು ಸರಿಯಾದ ನೈರ್ಮಲ್ಯ ಸೌಲಭ್ಯಗಳ ಸೀಮಿತ ಪ್ರವೇಶವು ರೋಗದ ಹರಡುವಿಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಅಂತ ಹೇಳಿದ್ದಾರೆ