ವಿಜಯಪುರ : ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಡಿಕೆ ಶಿವಕುಮಾರ ಬಿಡುಗಡೆ ಮಾಡಿದ್ದಾರೆಂಬ ಅರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಡಿಕೆ ಶಿವಕುಮಾರ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೇ ಬರಲ್ಲ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ವಿಜಯಪುರ ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,ಶಿವಕುಮಾರ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೇ ಬರಲ್ಲ. ಡಿಕೆಶಿ ಹೆಸರನ್ನು ನೂರು ಸಲ, ನೂರು ವಿಚಾರಗಳಲ್ಲಿ ಹೇಳುತ್ತಾರೆ. ಜಾರಕಿಹೋಳಿ ವಿಚಾರದಲ್ಲಿಯೂ ಡಿಕೆಶಿ ಹೆಸರು ಹೇಳಿದ್ದರು ಬಿಜೆಪಿಯವರು ಮಹಿಳಾ ವಿರೋಧಿಗಳು. ಬಿಜೆಪಿಯವರು ಮಹಿಳೆಯರಿಗೆ ಯಾವುದೇ ಶಿಕ್ಷಣ ಕೊಟ್ಟಿಲ್ಲ. ಮಾತೃ ಶಕ್ತಿ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರದ ಮಹಿಳೆ ಮೇಲೆ ರ ಅತ್ಯಾಚಾರ ಆದಾಗ ಮಾತನಾಡಿಲ್ಲ ಎಂದರು.
ಉತ್ತರ ಪ್ರದೇಶದಲ್ಲಿ ಒಬ್ಬರು ತಪ್ಪು ಮಾಡಿದರೆ ಬುಲ್ಡೋಜರ್ ನಿಂದ ಮನೆ ಒಡೆಯುತ್ತಾರೆ, ಯುಪಿಯಲ್ಲಿ ಎಂಪಿ ಯನ್ನು ಗುಂಡಿಕ್ಕಿ ಕೊಂದರು, ಈ ವಿಚಾರದಲ್ಲಿ ಅಮಿತ್ ಶಾ ಬಾಯಿ ಬಿಡಲಿಲ್ಲ, ದೆಹಲಿಯಲ್ಲಿ ರೈತರ ಹೋರಾಟದಲ್ಲಿ 700 ಜನ ರೈತರು ಮೃತಪಟ್ಟರು ಆಗಲೂ ಮಾತನಾಡಲಿಲ್ಲ.ಪ್ರಜ್ವಲ್ ರೇವಣ್ಣನ ರೀತಿ ಕಾಂಗ್ರೆಸ್ ಮಾಡಿದ್ದರೆ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ರಾಜ್ಯದಲ್ಲಿ ಬಾಂಬ್ ಸ್ಟೋಟವಾಗಿದ್ದರ ಕುರಿತು ಸರ್ಕಾರದ ಮೇಲೆ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, 2008 ರಲ್ಲಿ ಸಿಎಂ ಯಡಿಯೂರಪ್ಪ ಕಂಠೀರವ ಸ್ಟುಡಿಯೋ ಬಳಿ ಬಾಂಬ್ ಸ್ಪೋಟವಾಗಿತ್ತು 2010 ಸರಣಿ ಬಾಂಬ್ ಸ್ಪೋಟವಾಗಿತ್ತು, 2013 ಮಲ್ಲೇಶ್ವರಂನಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸ್ಪೋಟವಾಗಿತ್ತು, 2020 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಾಂಬ್ ಬ್ಲಾಸ್ಟ್ , 2022 ರಲ್ಲಿ ಬೊಮ್ಮಾಯಿ, 2024 ರಲ್ಲಿ ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬ್ಲಾಸ್ಟ್ ಆಗಿದೆ. ಈಗ ಮೋದಿ ಯಾರ ಅಧಿಕಾರದಲ್ಲಿ ಹೆಚ್ಚು ಸ್ಪೋಟ ಆಗಿದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.