ಬೆಂಗಳೂರು: ಬಿಜೆಪಿ ನಾಯಕರೇ ಏಕೆ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಎಕ್ಸ್ ಮಾಡಿ ಪ್ರಶ್ನಿಸಿದೆ.
ಈ ಕುರಿತಂತೆ ಎಕ್ಸ್ ಮಾಡಿರುವಂತ ಕಾಂಗ್ರೆಸ್, ಅಂದು – ಪ್ರಜ್ವಲ್, ರೇವಣ್ಣನ ಮಗ ಅಲ್ಲ, ನನ್ನ ಮಗ. ಇಂದು – ಅವರೇ ಬೇರೆ, ನಾವೇ ಬೇರೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಅಂದು – “ಪ್ರಜ್ವಲ್ ರೇವಣ್ಣನನ್ನು ಬೆಂಬಲಿಸಿ ನನಗೆ ಶಕ್ತಿ ತುಂಬಿ” ಇಂದು – ಮೌನವನ್ನು ಪ್ರಧಾನಿ ನರೇಂದ್ರ ಮೋದಿಯವರು ವಹಿಸಿದ್ದಾರೆ ಎಂಬುದಾಗಿ ಹೇಳಿದೆ.
ಬಿಜೆಪಿ ಹಾಗೂ ಮಿತ್ರರ ನಾಲಿಗೆಗೆ ಮೂಳೆ ಇಲ್ಲದ ನಾಲಿಗೆ ಯಾವಾಗ ಹೇಗೆ ಬೇಕಾದರೂ ಹೊರಳುತ್ತದೆ, ಅವರ ಸಿದ್ದಾಂತವೂ ಅಷ್ಟೇ, ಅವರ ಯೋಚನೆಯೂ ಅಷ್ಟೇ! ಬಿಜೆಪಿ ನಾಯಕರೇ, ಏಕೆ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರ ಬಗ್ಗೆ ಕಾಳಜಿ ತೋರುತ್ತಿಲ್ಲ? ನಿಮ್ಮ ನಾಲಿಗೆಗಳು ಈಗ ಏಕೆ ನಲಿದಾಡುತ್ತಿಲ್ಲ? ಎಂದು ಪ್ರಶ್ನಿಸಿದೆ.
ಅಂದು – ಪ್ರಜ್ವಲ್, ರೇವಣ್ಣನ ಮಗ ಅಲ್ಲ, ನನ್ನ ಮಗ.
ಇಂದು – ಅವರೇ ಬೇರೆ, ನಾವೇ ಬೇರೆ.
– @hd_kumaraswamyಅಂದು – "ಪ್ರಜ್ವಲ್ ರೇವಣ್ಣನನ್ನು ಬೆಂಬಲಿಸಿ ನನಗೆ ಶಕ್ತಿ ತುಂಬಿ"
ಇಂದು – ಮೌನ
–@narendramodiಬಿಜೆಪಿ ಹಾಗೂ ಮಿತ್ರರ ನಾಲಿಗೆಗೆ ಮೂಳೆ ಇಲ್ಲದ ನಾಲಿಗೆ ಯಾವಾಗ ಹೇಗೆ ಬೇಕಾದರೂ ಹೊರಳುತ್ತದೆ, ಅವರ ಸಿದ್ದಾಂತವೂ ಅಷ್ಟೇ, ಅವರ… pic.twitter.com/csl9lrSJm3
— Karnataka Congress (@INCKarnataka) April 29, 2024
Shocking Video: ಮದುವೆ ಮೆಹಂದಿ ಶಾಸ್ತ್ರದ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಯುವತಿಗೆ ಹೃದಯಾಘಾತ: ಸ್ಥಳದಲ್ಲೇ ಸಾವು
ಕೋವಿಡ್ ಗುಣಮುಖ ಸುಳ್ಳು ಹೇಳಿಕೆ ಮೂಲಕ ‘ಬಾಬಾ ರಾಮದೇವ್’ ರೆಡ್ ಲೈನ್ ದಾಟಿದ್ದಾರೆ : IMA ಅಧ್ಯಕ್ಷ