ಯಾದಗಿರಿ: ಮಾಜಿ ಸಚಿವ ಭೈರತಿ ಬಸವರಾಜ್ ಅವರ ಕಾರು ಜಿಲ್ಲೆಯಲ್ಲಿ ಪಲ್ಟಿಯಾಗಿದೆ. ಈ ಪರಿಣಾಮ, ಅದರಲ್ಲಿ ಇದ್ದಂತ ಕಾರು ಚಾಲಕ, ಗನ್ ಮ್ಯಾನ್ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಬಳಿಯಲ್ಲಿ ಬಿಜೆಪಿಯ ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ಸೇರಿದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಕಾರು ಪಲ್ಟಿಯಾದ ಪರಿಣಾಮ ಅದರಲ್ಲಿ ಇದ್ದಂತ ಚಾಲಕ, ಬೈರತಿ ಬಸವರಾಜ್ ಅವರ ಗನ್ ಮ್ಯಾನ್ ಗೆ ಸಣ್ಣಪುಟ್ಟ ಗಾಯವಾಗಿರೋದಾಗಿ ತಿಳಿದು ಬಂದಿದೆ.
ತಮ್ಮ ಕಾರಿನಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್ ತೆರಳದೇ ಬೇರೆಯವರ ಕಾರಿನಲ್ಲಿ ತೆರಳುತ್ತಿದ್ದರು. ಹೀಗಾಗಿ ಅವರು ಕಾರು ಪಲ್ಟಿ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯಕ್ಕೆ ಒಳಗಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಮೋದಿ ಕಾಂಗ್ರೆಸ್ ಪಕ್ಷವನ್ನು ಬೈಯ್ಯೋದು ಬಿಟ್ಟು ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಹೇಳಲಿ- ಮಲ್ಲಿಕಾರ್ಜುನ ಖರ್ಗೆ
BREAKING : ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ : ಅಸ್ಸಾಂ ಪೊಲೀಸರಿಂದ ಮೊದಲ ಆರೋಪಿ ಬಂಧನ