Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

08/03/2026 7:58 AM

ಟೆಹ್ರಾನ್ ತೈಲ ಡಿಪೋ ಮೇಲೆ ಇಸ್ರೇಲ್ ಅಟ್ಟಹಾಸ: ಬೆಂಕಿಯ ಕೆನ್ನಾಲಿಗೆಯ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ‘ಬಾಂಬ್‌ಶೆಲ್’ ಹೇಳಿಕೆ ಏನು?

08/03/2026 7:45 AM

ದುಬೈನಲ್ಲಿ ಆಹಾರ ಕ್ಷಾಮದ ಭೀತಿ: ‘ಬರೀ 8 ದಿನಕ್ಕಾಗುವಷ್ಟು ಮಾತ್ರ ಅನ್ನವಿದೆ!’ – ಇರಾನ್ ಯುದ್ಧದ ನಡುವೆ ಯುಎಇ ನೀಡಿದ ಆಘಾತಕಾರಿ ಎಚ್ಚರಿಕೆ!

08/03/2026 7:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ‘ಪಕೋಡ ಮಾರಿ’ ಎಂದರು: ಸಿಎಂ ಸಿದ್ದರಾಮಯ್ಯ
KARNATAKA

ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ‘ಪಕೋಡ ಮಾರಿ’ ಎಂದರು: ಸಿಎಂ ಸಿದ್ದರಾಮಯ್ಯ

By kannadanewsnow0729/04/2024 8:01 AM

ರಾಯಚೂರು: ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ಪ್ರಧಾನ ಮಂತ್ರಿಗಳು ‘ಪಕೋಡ ಮಾರಿ’ ಎಂದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಸಿಂಧನೂರು ನಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜಶೇಖರ್ ಹಿಟ್ನಾಳ್ ಯವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ವಿದೇಶದಿಂದ ಬಂದ ಕಪ್ಪು ಹಣವನ್ನು ತಂದು ದೇಶದ ಎಲ್ಲ ಜನರ ಖಾತೆಗೆ 15 ಲಕ್ಷ ರೂ.ಹಾಕುತ್ತೇವೆ ಎಂದಿದ್ದ ಮೋದಿಯವರು ಹತ್ತು ವರ್ಷವಾದರೂ ಹಣ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಜನರಿಗೆ ಕೆಲಸ ನೀಡುತ್ತೇನೆ ಎಂದಿದ್ದರು. ಇದನ್ನು ನಂಬಿ ದೇಶದ ಯುವಜನತೆ ‘ಮೋದಿ , ಮೋದಿ’ ಎಂದು ನಂಬಿದ್ದರೆ, ಮೋದಿಯವರು ‘ಪಕೋಡ ಮಾರಲಿ’ ಎಂದು ಯುವಜನರಿಗೆ ಹೇಳಿದ್ದು, ಮೋದಿಯವರ ಬೇಜವಾಬ್ದಾರಿಯನ್ನು ತೋರುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಸುಳ್ಳನ್ನು ಹೇಳಿದರು. ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಮೋದಿಯವರು ರೂಪಾಯಿ ಮೌಲ್ಯವನ್ನು ಹೆಚ್ಚಿಸುತ್ತೇನೆ ಎಂದು ಸುಳ್ಳು ಹೇಳಿ, ಡಾಲರ್ ಮೌಲ್ಯವನ್ನು ಹೆಚ್ಚಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಅವರು ಎಲ್ಲ ಸುಳ್ಳು ಭರವಸೆಗಳನ್ನು ನೀಡಿ, ಮೋದಿಯವರು ಕಳೆದ 10 ವರ್ಷಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. 2014 ಹಾಗೂ 2019 ರಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿ, ಈಗ ಜನರಿಗೆ ಅವರ ಮಾತುಗಳನ್ನು ಸುಳ್ಳು ಎಂದು ತಿಳಿದಿದ್ದಾರೆ ಎಂದರು.

ಮೀಸಲಾತಿ ಬಗ್ಗೆ ಮೋದಿ ಸುಳ್ಳು ಹೇಳುತ್ತಿದ್ದಾರೆ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದ್ದಾರೆ ಎಂದು ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಹಿಂದೆ ಹಾಗೂ ಇಂದಿನ ಅವಧಿಯಲ್ಲಿ ಎಂದಿಗೂ ಮೀಸಲಾತಿಗಳನ್ನು ಬದಲಾಯಿಸಿಲ್ಲ. ಕಳೆದ 30 ವರ್ಷಗಳಿಂದ ಮುಸಲ್ಮಾನರಿಗೆ 4% ಮೀಸಲಾತಿ ನೀಡಲಾಗುತ್ತಿದ್ದು, ಮೀಸಲಾತಿ ಬಗ್ಗೆ ಮೋದಿಯವರು ಸುಳ್ಳು ಹೇಳಿ, ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿಯವರು ಮುಸಲ್ಮಾನರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋದಾಗ, ಮೀಸಲಾತಿಯನ್ನು ಯಥಾವತ್ತು ಮುಂದುವರೆಸುವುದಾಗಿ ಬಿಜೆಪಿ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದರು.

ಸುಳ್ಳು ಹೇಳಿ ಜನರ ದಾರಿತಪ್ಪಿಸಬಹುದೆಂಬುದು ಮೋದಿಯವರ ಭ್ರಮೆ

ನಾನು ರಾಜಕೀಯದಲ್ಲಿ 45 ವರ್ಷದಿಂದ ಇದ್ದೇನೆ, ಆದರೆ ನನ್ನ ಅನುಭವದಲ್ಲಿ ಇಷ್ಟು ಸುಳ್ಳು ಹೇಳುವ ಮೋದಿಯಂತಹ ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ. ಸುಳ್ಳು ಹೇಳಿ ಜನರ ದಾರಿತಪ್ಪಿಸಲು ಸಾಧ್ಯವಿಲ್ಲ. ಹಾಗೆ ತಿಳಿದಿದ್ದಲ್ಲಿ ಅದು ಮೋದಿಯವರ ಭ್ರಮೆ.

ಮೋದಿಯವರು ಬಡಜನರಿಗೆ ಶಕ್ತಿ ತುಂಬಲಿಲ್ಲ

ಶಿವಾಜಿಯವರನ್ನು ಹಾಗೂ ಕಿತ್ತೂರು ರಾಣಿ ಚೆನ್ನಮ್ಮನನ್ನು ಕಾಂಗ್ರೆಸ್ ಸರ್ಕಾರ ಅವಮಾನಿಸಿದೆ ಎಂದು ಮೋದಿಯವರು ಸುಳ್ಳು ಹೇಳಿದ್ದಾರೆ. ಆದರೆ ನನ್ನ ಅವಧಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಹಾಗೂ ವಿಶ್ವಗುರು ಬಸವಣ್ಣನವರನ್ನು ವಿಶ್ವ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರವೇ ಘೋಷಿಸಿದ್ದು, ಮೋದಿಯವರು ಸುಳ್ಳು ನುಡಿಯುತ್ತಿದ್ದಾರೆ. ಈ ಕಾರ್ಯವನ್ನು ಯಡಿಯೂರಪ್ಪನವರಾಗಲಿ ಅಥವಾ ಬೊಮ್ಮಾಯಿಯವರು ಮಾಡಲಿಲ್ಲ. ಮೋದಿಯವರು ಅಧಿಕಾರದಲ್ಲಿದ್ದಾಗ ಬಡಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಲಿಲ್ಲ ಎಂದರು.

he said 'sell pakodas': Siddaramaiah Instead of giving jobs to the youth of the country ದೇಶದ ಯುವಕರಿಗೆ ಉದ್ಯೋಗ ನೀಡುವ ಬದಲು ‘ಪಕೋಡ ಮಾರಿ’ ಎಂದರು: ಸಿಎಂ ಸಿದ್ದರಾಮಯ್ಯ
Share. Facebook Twitter LinkedIn WhatsApp Email

Related Posts

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

08/03/2026 7:58 AM1 Min Read

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

08/03/2026 6:19 AM2 Mins Read

ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್

08/03/2026 5:36 AM2 Mins Read
Recent News

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

08/03/2026 7:58 AM

ಟೆಹ್ರಾನ್ ತೈಲ ಡಿಪೋ ಮೇಲೆ ಇಸ್ರೇಲ್ ಅಟ್ಟಹಾಸ: ಬೆಂಕಿಯ ಕೆನ್ನಾಲಿಗೆಯ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ‘ಬಾಂಬ್‌ಶೆಲ್’ ಹೇಳಿಕೆ ಏನು?

08/03/2026 7:45 AM

ದುಬೈನಲ್ಲಿ ಆಹಾರ ಕ್ಷಾಮದ ಭೀತಿ: ‘ಬರೀ 8 ದಿನಕ್ಕಾಗುವಷ್ಟು ಮಾತ್ರ ಅನ್ನವಿದೆ!’ – ಇರಾನ್ ಯುದ್ಧದ ನಡುವೆ ಯುಎಇ ನೀಡಿದ ಆಘಾತಕಾರಿ ಎಚ್ಚರಿಕೆ!

08/03/2026 7:36 AM

​ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ 52,000ಕ್ಕೂ ಹೆಚ್ಚು ಜನರ ಸುರಕ್ಷಿತ ವಾಪಸಾತಿ: ಕೇಂದ್ರ ವಿದೇಶಾಂಗ ಇಲಾಖೆಯಿಂದ ಬಿಗ್ ಅಪ್‌ಡೇಟ್!

08/03/2026 7:21 AM
State News
KARNATAKA

ರೇಣುಕಾಸ್ವಾಮಿ ಕೊಲೆ ಕೇಸ್ : ಆರೋಪಿಗಳ ಜಾಮೀನು ರದ್ದು ಕೊರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ

By kannadanewsnow0508/03/2026 7:58 AM KARNATAKA 1 Min Read

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ…

ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ

08/03/2026 6:19 AM

ಕುಸುಮ್-ಬಿ ಮೂಲಕ ನೀರಾವರಿ ಚಟುವಟಿಕೆಗಳಿಗೆ ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್

08/03/2026 5:36 AM

ಬೆಂಗಳೂರಿನ ಸರ್ವಜ್ಞನಗರದ ‘ಸ್ವಚ್ಛತಾ ಯೋಧರಿಗೆ’ ಗೌರವ: ನಾಳೆ ಪೌರಕಾರ್ಮಿಕರಿಗೆ ವಿಶೇಷ ಅಭಿನಂದನಾ ಸಮಾರಂಭ

07/03/2026 11:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.