ಬೆಂಗಳೂರು: ಬರ ಪರಿಹಾರದಲ್ಲಿ ಬಿಡುಗಡೆಮಾಡಬೇಕಾಗಿರುವ ಹಣದಲ್ಲಿ ಕಡಿತ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ನಾಳೆ ಬೆಂಗಳೂರಿನ ವಿಧಾನಸೌಧದ ಮುಂದಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ಇಂದು ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೇ ಅವರು ಮಾತನಾಡಿ ಬಿಜೆಪಿಯ ಸಂಸದರು ಒಬ್ಬರು ಕೂಡ ಸಂಸತ್ತಿನಲ್ಲಿ ಮಾತನಾಡಿಲ್ಲ, ಇವರು ಪ್ರಧಾನಿ ಮೋದಿ ಮುಂದೆ ಒಂದು ದಿನವೂ ಮತಾನಾಡಿಲ್ಲ ಅಂಥ ಹೇಳಿದರು. ಇನ್ನೂ ಪ್ರಧಾನಿ ಮೋದಿಯವರು ತಮ್ಮ ಅಧಿಕಾರವಾಧಿಯಲ್ಲಿ ಹೇಳಿದ್ದ ಯಾವುದೇ ಜನ ಪರ ಕೆಲಸಗಳನ್ನುಮಾಡಿಲ್ಲ ಅಂತ ಹೇಳಿದರು. ಇನ್ನೂ ಕಪ್ಪು ಹಣವನ್ನು ವಾಪಸ್ಸು ತರುವ ಬಗ್ಗೆ ಇಲ್ಲಿ ತನಕ ಅವರು ಮಾತೇ ಆಡಿಲ್ಲ ಅಂಥ ಹೇಳಿದರು. ಇನ್ನೂ ರೈತರ ಅದಾಯವನ್ನು ದುಪಟ್ಟು ಮಾಡುತ್ತೇವೆ ಅಂತ ಹೇಳಿದರು, ಅದು ಕೂಡ ಆಗಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ, ಗೊಬ್ಬರ, ಅಡುಗೆ ಅನಿಲ ಬೆಲೆ ಕಡಿಮೆ ಆಗಿಲ್ಲ ಅಂತ ಹೇಳಿದರು.