ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದೆ. ಇನ್ನೇನು 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಒಂದು ಗಂಟೆ ಮಾತ್ರವೇ ಬಾಕಿ ಇದೇ. ಇದರ ನಡುವೆ 5 ಗಂಟೆಯವರೆಗೆ ಶೇ.63.90ರಷ್ಟು ಮತದಾನವಾಗಿದೆ.
ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.63.90ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.
ಇಲ್ಲಿದೆ 14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ
- ಉಡುಪಿ-ಚಿಕ್ಕಮಗಳೂರು – ಶೇ.72.13
- ಹಾಸನ- ಶೇ.72.13
- ದಕ್ಷಿಣ ಕನ್ನಡ- ಶೇ.71.83
- ಚಿತ್ರದುರ್ಗ- ಶೇ.67
- ತುಮಕೂರು – ಶೇ.72.10
- ಮಂಡ್ಯ- ಶೇ.74.87
- ಮೈಸೂರು- ಶೇ.65.85
- ಚಾಮರಾಜನಗರ- ಶೇ.69.60
- ಬೆಂಗಳೂರು ಗ್ರಾಮಾಂತರ – ಶೇ.61.78
- ಬೆಂಗಳೂರು ಉತ್ತರ- ಶೇ.50.84
- ಬೆಂಗಳೂರು ಕೇಂದ್ರ – ಶೇ.48.61
- ಬೆಂಗಳೂರು ದಕ್ಷಿಣ- ಶೇ.49.37
- ಚಿಕ್ಕಬಳ್ಳಾಪುರ – ಶೇ.70.97
- ಕೋಲಾರ- ಶೇ.71.26
‘SC, ST, OBC’ ಹಕ್ಕುಗಳನ್ನ ಕಸಿದುಕೊಳ್ಳಲು ಕಾಂಗ್ರೆಸ್ ಪಿತೂರಿ : ಪ್ರಧಾನಿ ಮೋದಿ