Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬಾಲಿಯ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗರ ಕೈಚಳಕ: ಡೋರ್ ಮ್ಯಾಟ್, ಹೇರ್ ಡ್ರೈಯರ್ ಕಳ್ಳತನ; ಲಗೇಜ್ ಚೆಕ್ ವಿಡಿಯೋ ವೈರಲ್!

22/04/2026 7:45 PM

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉತ್ತರ ಕರ್ನಾಟಕದ ಜನತೆಗೆ ಬಿಗ್ ಶಾಕ್ : ಇಂದಿನಿಂದ ಮೇ 2ರ ವರೆಗೆ ವಿಪರೀತ ‘ಬಿಸಿಲು, ಬಿಸಿಗಾಳಿ’!
KARNATAKA

ಉತ್ತರ ಕರ್ನಾಟಕದ ಜನತೆಗೆ ಬಿಗ್ ಶಾಕ್ : ಇಂದಿನಿಂದ ಮೇ 2ರ ವರೆಗೆ ವಿಪರೀತ ‘ಬಿಸಿಲು, ಬಿಸಿಗಾಳಿ’!

By kannadanewsnow5726/04/2024 6:12 AM

ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಗೆ ಹವಾಮಾನ ಇಲಾಖೆ ಶಾಕ್ ನೀಡಿದೆ. ಇಂದಿನಿಂದ ಮೇ. 2ರವರೆಗೆ ವಿಪರೀತ ಬಿಸಿಲು, ಬಿಸಿಗಾಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಜೊತೆಗೆ ರಣ ಬಿಸಿಲಿನ ಆರ್ಭಟ ಕೂಡ ಮುಂದುವರೆದಿದೆ. ಇಂದಿನಿಂದ ಮೇ 2ರ ವರೆಗೆ ಉತ್ತರ ಕರ್ನಾಟಕದ ಹಲವು ಸ್ಥಳಗಳಲ್ಲಿ ವಿಪರೀತ ಬಿಸಿಲು, ಬಿಸಿಗಾಳಿ ಇರಲಿದೆ. ಆದ್ದರಿಂದ ಜನರು ಹೆಚ್ಚು ಬಿಸಿಲಿನಲ್ಲಿ ಓಡಾಡದೆ ತಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದೆ.

ಅತೀ ಹೆಚ್ಚು ತಾಪಮಾನದಿಂದ ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾಮಾನ್ಯ ಸೂಚನೆಗಳು:

ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು (ಮಧ್ಯಾಹ್ನ 12.00 ರಿಂದ 3.00 ರವರೆಗೆ). ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುವುದು. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆಗಳನ್ನು ಧರಿಸುವುದು. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ / ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸುವುದು. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವುದು (ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು). ಪ್ರಯಾಣ ಮಾಡುವಾಗ, ನೀರನ್ನು ಜೊತೆಯಲ್ಲಿ ಒಯ್ಯುವುದು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸುವುದು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸುವುದು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡದಿರುವುದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿಮಾಡುವುದು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‍ಎಸ್ ಅನ್ನು ಬಳಸುವುದು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುವುದು. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್‍ ಗಳು ಅಥವಾ ಸನ್‍ಶೇಡ್‍ಗಳನ್ನು ಬಳಸುವುದು. ಹಾಗೂ ಆಗ್ಗಿಂದಾಗೆ ತಣ್ಣೀರು ಸ್ನಾನ ಮಾಡುವುದು. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ / ಟೋಪಿ ಅಥವಾ ಕ್ಯಾಪ್ / ಹೆಡ್‍ಕವರ್, ಹ್ಯಾಂಡ್‍ಟವೆಲ್, ಹ್ಯಾಂಡ್ ಪ್ಯಾನ್, ಎಲೆಕ್ಟೋಲೈಟ್ / ಗ್ಲೂೀಕೋಸ್ / ಓಆರ್‍ಎಸ್‍ಅನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್‍ಅನ್ನು ಒಯ್ಯುವುದು.

ಅತೀ ಹೆಚ್ಚು ತಾಪಮಾನದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಹಾಗೂ ಗುರುತಿಸುವಿಕೆ:

ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು / ಅಥವಾ ಶಾಖದ ಅಘಾತದಂತಹ ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಅವುಗಳ ರೋಗ ಲಕ್ಷಣಗಳು ಈ ಕೆಳಕಂಡಂತಿವೆ:
ಶಾಖ ಸೆಳೆತಗಳು (Heat cramps) : ಎಡೆರ್ನಾ (ಊತ) ಮತ್ತು ಮೂರ್ಛೆ ಸಾಮಾನ್ಯವಾಗಿ 39 ಡಿ.ಸೆ. ಅಂದರೆ 102 °F ಗಿಂತ ಕಡಿಮೆ ಜ್ವರದಿಂದ ಕೂಡಿರುತ್ತದೆ.

ಶಾಖದ ಬಳಲಿಕೆ : ಆಯಾಸ, ದೌರ್ಭಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು.
ಶಾಖಾಘಾತ (Sun Stroke) : ದೇಹದ ಉಷ್ಣತೆಯು 40 ಡಿ.ಸೆ. ಅಂದರೆ 104 °F ಅಥವಾ ಅದಕ್ಕಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞೆ ತಪ್ಪುವುದು.

ಅತೀ ಹೆಚ್ಚು ತಾಪಮಾನಕ್ಕೆ ಸಂಬಂಧಿತ ಕಾಯಿಲೆಗೆ ಪ್ರಥಮ ಚಿಕಿತ್ಸೆ:
ಅತೀ ಹೆಚ್ಚು ತಾಪಮಾನದಿಂದ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ, ಸ್ಥಳಾಂತರಿಸುವುದು. ಒದ್ದೆಯಾದ ಬಟ್ಟೆಯಿಂದ ಮೈ ಒರೆಸುವುದು / ತಂಪಾದ ಒದ್ದೆ ಬಟ್ಟೆಯನ್ನು ಹಾಕುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕುವುದು. ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓಆರ್‍ಎಸ್. ನಿಂಬೆ ಪಾನಕ ನೀಡುವುದು (ವ್ಯಕ್ತಿ ಇನ್ನೂ ಪ್ರಜ್ಞೆ ಹೊಂದಿದ್ದರೆ). ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡುವುದು. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸುವುದು. ರೋಗ ಲಕ್ಷಣಗಳು ಉಲ್ಬಣಗೊಂಡರೆ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸುವುದು. ಮದ್ಯ ಪಾನ, ಕಾಫಿ, ಶೇಖರಿಸಿದ ಪಾನೀಯವನ್ನು ನೀಡಬಾರದು.

Big shock to the people of North Karnataka: Intense 'sunshine hot wind' from today till May 2 ಉತ್ತರ ಕರ್ನಾಟಕದ ಜನತೆಗೆ ಬಿಗ್ ಶಾಕ್ : ಇಂದಿನಿಂದ ಮೇ 2ರ ವರೆಗೆ ವಿಪರೀತ ‘ಬಿಸಿಲು ಬಿಸಿಗಾಳಿ’!
Share. Facebook Twitter LinkedIn WhatsApp Email

Related Posts

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM1 Min Read

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM2 Mins Read

ಸಾಗರ ಮೀನು ಮಾರುಕಟ್ಟೆಗೆ ಕಾಯಕಲ್ಪ: ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ಲೋಕಾರ್ಪಣೆಯೆಂದ ಶಾಸಕರು

22/04/2026 6:54 PM2 Mins Read
Recent News

​ಬಾಲಿಯ ಹೋಟೆಲ್‌ನಲ್ಲಿ ಭಾರತೀಯ ಪ್ರವಾಸಿಗರ ಕೈಚಳಕ: ಡೋರ್ ಮ್ಯಾಟ್, ಹೇರ್ ಡ್ರೈಯರ್ ಕಳ್ಳತನ; ಲಗೇಜ್ ಚೆಕ್ ವಿಡಿಯೋ ವೈರಲ್!

22/04/2026 7:45 PM

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

22/04/2026 7:38 PM

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM

ಅಮೆರಿಕಾಕ್ಕೆ ಬಿಗ್ ಶಾಕ್: ಇರಾನ್ ಯುದ್ಧದ ಮಧ್ಯೆ 2,000 ಕೋಟಿ ರೂ. ಮೌಲ್ಯದ ‘ಟ್ರೈಟಾನ್’ ಡ್ರೋನ್ ಪತನ!

22/04/2026 7:31 PM
State News
KARNATAKA

BIG BREAKING: ನಾಳೆ ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ ಘೋಷಣೆ

By kannadanewsnow0922/04/2026 7:38 PM KARNATAKA 1 Min Read

ಬೆಂಗಳೂರು: ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವುದಾಗಿ ಸಚಿವ ಮಧು ಬಂಗಾರಪ್ಪ ಅವರು…

ಸಿಎಂ ಭೇಟಿ ಬಳಿಕ SSLC ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

22/04/2026 7:31 PM

ಸಾಗರ ಮೀನು ಮಾರುಕಟ್ಟೆಗೆ ಕಾಯಕಲ್ಪ: ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ಲೋಕಾರ್ಪಣೆಯೆಂದ ಶಾಸಕರು

22/04/2026 6:54 PM

ಸಾಗರದಲ್ಲಿ ‘ಹೈಟೆಕ್ ಸಬ್ ರಿಜಿಸ್ಟ್ರಾರ್ ಕಚೇರಿ’ ನಿರ್ಮಾಣ: ಶಾಸಕ ಗೋಪಾಲಕೃಷ್ಣ ಬೇಳೂರು

22/04/2026 6:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.