ಬೆಂಗಳೂರು: ಫ್ರಿ ಬಸ್ ಕೊಟ್ರು ಅಂತ ಹೆಣ್ ಮಕ್ಕಳು ಎಲ್ಲೆಲೋ ಹೋಗ್ತಾವ್ರೆ ಎನ್ನುವುದರ ಮೂಲಕ ಬಿಜೆಪಿ ನಾಯಕಿ, ಚಿತ್ರನಟಿ ಶೃತಿ ಅವರು ವಿವಾದತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ರಾಜ್ಯ ಮಹಿಳಾ ಆಯೋಗದಿಂದ ನಟಿ ಶೃತಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ನಟಿ ಶೃತಿಯವರು ಹೇಳಿದಂತ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವಿಡಿಯೋವೊಂದರಲ್ಲಿ ಅವರು ಹಲವು ಕಡೆಗಳಲ್ಲಿ ಗಂಡದರು ಮನೆಯಲ್ಲಿ ಅಳುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಹಸಿವಿನಿಂದ ಇದ್ದಾರೆ. ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹೆಣ್ಣುಮಕ್ಕಳು ಜುಟ್ಟುಹಿಡಿದುಕೊಂಡು ಹೊಡೆದುಕೊಳ್ಳುತ್ತಿದ್ದಾರೆ ಅಂತ ಆರೋಪಿಸಿದ್ದರು.
ನ್ನೂ ಹಲವು ಮಂದಿ ಶೃತಿ ಅವರ ಹೇಳಿಕೆ ನೋಡಿ ಅವರ ವೈಯುಕ್ತಿಕ ಜೀವನದ ಬಗ್ಗೆ ಕೂಡ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದು ತಪ್ಪು ಅಂತ ಕೂಡ ಹಲವು ಮಂದಿ ಬುದ್ದಿ ಹೇಳುತ್ತಿದ್ದರು.
ಈ ವಿವಾದಾತ್ಮಕ ಹೇಳಿಕೆ ಸಂಬಂಧ ನಟಿ ಶೃತಿಗೆ ರಾಜ್ಯ ಮಹಿಳಾ ಆಯೋಗವು ನೋಟಿಸ್ ನೀಡಲಾಗಿದೆ. ಅದರಲ್ಲಿ ರಾಜ್ಯ ಮಹಿಳಾ ಆಯೋಗದ ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.
ದ್ವಿತೀಯ ಪಿಯುಸಿ ರಾಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್: 17 ಆರೋಪಿಗಳು ಖುಲಾಸೆ
‘ಮತದಾರರೇ, ಮತಗಟ್ಟೆ ಅಧಿಕಾರಿ’ಗಳೇ ಗಮನಿಸಿ: ನಾಳೆ ‘ಮತದಾನ ಕೇಂದ್ರ’ದಲ್ಲಿ ‘ಮೊಬೈಲ್ ಬಳಕೆ’ಗೆ ಅವಕಾಶವಿಲ್ಲ