ಪೆರಾಕ್: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಪೆರಾಕ್ ನ ಲುಮುಟ್ ನಲ್ಲಿ ಮಂಗಳವಾರ ನಡೆದಿದೆ.
ಫ್ರೀ ಮಲೇಷ್ಯಾ ಟುಡೇ ವರದಿಯ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ ಮತ್ತು ವೈದ್ಯಕೀಯ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಅವರ ಸಾವುಗಳನ್ನು ದೃಢಪಡಿಸಿದ್ದಾರೆ ಎಂದು ಹೇಳಿದರು.
ಹೆಲಿಕಾಪ್ಟರ್ ಗಳಿಂದ ಸಂತ್ರಸ್ತರ ಶವಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
BREAKING: 🇲🇾 2 military helicopters crash after mid-air collision in Malaysia, killing all 10 people on board pic.twitter.com/ckiEaqnd4R
— Megatron (@Megatron_ron) April 23, 2024
ಅಂದಹಾಗೆ ರಾಯಲ್ ಮಲೇಷ್ಯಾ ನೌಕಾಪಡೆಯ ಆಚರಣೆ ಕಾರ್ಯಕ್ರಮಕ್ಕಾಗಿ ಪೂರ್ವಾಭ್ಯಾಸ ನಡೆಸುತ್ತಿದ್ದಾಗ ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು, ಈ ದುರಂತ ನಡೆದಿದೆ.
ರಾಯಚೂರಲ್ಲಿ ಭೀಕರ ಅಪಘಾತ: ಬೊಲೇರೋ ವಾಹನ ಡಿಕ್ಕಿಯಾಗಿ ಮೂವರು ಪಾದಚಾರಿಗಳು ಸ್ಥಳದಲ್ಲೇ ಸಾವು
ಇಂದು ‘ಬೆಂಗಳೂರು ಕರಗ’ ಮಹೋತ್ಸವ: ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ