ಬೆಳಗಾವಿ : ಹುಬ್ಬಳ್ಳಿಯಲ್ಲಿ ಬಿಬಿ ಕಾಲೇಜಿನ ಆವರಣದಲ್ಲಿ ನೇಹ ಹಿರೇಮಠ್ ಕೊಲೆ ಇನ್ನು ಹಸಿರಾಗಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಸೌದತ್ತಿ ಪೊಲೀಸ್ ಅಣ್ಣ ವ್ಯಾಪ್ತಿಯಲ್ಲಿ ಮುಸ್ಲಿಂ ದಂಪತಿಗಳಿಂದ ಮತಾಂತರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಸೌದತ್ತಿ ಠಾಣಾ ವ್ಯಾಪ್ತಿಯಲ್ಲಿ ಲವ್ ಜಿಹಾದ್ ಹೆಸರಲ್ಲಿ ಮತಾಂತರಕ್ಕೆ ಯತ್ನಿಸಿದ ರಫೀಕ್ ಬೇಫಾರಿ ಹಾಗೂ ಪತ್ನಿ ಕೌಸರ್ ಳನ್ನು ಇದೀಗ ಬಂಧಿಸಲಾಗಿದೆ.ಸಂತ್ರಸ್ತ ಮಹಿಳೆ ಮತಾಂತರದ ಆರೋಪ ಮಾಡಿದ್ದಳು ಎಂದು ಹೇಳಲಾಗುತ್ತಿದೆ. ಸೌದತ್ತಿ ಠಾಣೆಯಲ್ಲಿ ಅನ್ಯಾಯ ಕೊಳಗಾಗಿದ್ದ ಮಹಿಳೆ ದೂರನ್ನು ದಾಖಲಿಸಿದ್ದಳು.
ಮಹಿಳೆಯ ದೂರಿನ ಅನ್ವಯ ಇದೀಗ ಗಂಡ ಹೆಂಡತಿಯನ್ನು ಅರೆಸ್ಟ್ ಮಾಡಲಾಗಿದೆ.ಖಾಸಗಿ ಕ್ಷಣದ ದೃಶ್ಯ ವೈರಲ್ ಮಾಡುವುದಾಗಿ ಹೇಳಿ ಬೆದರಿಸಿ ಮತಾಂತರಕ್ಕೆ ಗಂಡ ಹೆಂಡತಿ ಯತ್ನಿಸುತ್ತಿದ್ದರು. ಬುರ್ಖಾ ಹಾಕಬೇಕು ನಮಾಜ್ ಮಾಡಬೇಕೆಂದು ಕಂಡೀಶನ್ ಹಾಕಿದ್ದರು.ರಫೀಕ್ ನೀಡಿದ ಕಿರುಕುಳದ ಬಗ್ಗೆ ಮಹಿಳೆ ತನ್ನ ಪತಿಗೆ ಮಾಹಿತಿ ನೀಡಿದಳು ಎಂದು ಹೇಳಲಾಗುತ್ತಿದೆ.