ಬೀದರ್ : ಹುಬ್ಬಳ್ಳಿಯ ಬಿವಿಬಿ ಕಾಲೇಜುನಲ್ಲಿ ನೇಹಾ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಬೀದರ್ ನಲ್ಲಿ ಲವ್ ಜಿಹಾದ್ ಹೆಸರಲ್ಲಿ 9ನೇ ತರಗತಿ ಬಾಲಕಿಯ ಮೇಲೆ ಮುಸ್ಲಿಂ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘೋರ ದುರಂತ ನಡೆದಿದೆ.ಅನ್ಯಕೋಮಿನ ಯುವಕ ಕಳೆದ ಎರಡು ವರ್ಷಗಳಿಂದ ಹಿಂದೂ ಧರ್ಮದ 9ನೇ ತರಗತಿ ಹುಡುಗಿಯನ್ನು ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಮಾಡಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಘಟನೆ ಕುರಿತಂತೆ ವಿದ್ಯಾರ್ಥಿನಿ ತಾಯಿ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಜ್ಯದ ಗಡಿ ಜಿಲ್ಲೆ ಬೀದರ್ನಲ್ಲಿ ಮುಸ್ಲಿಂ ಯುವಕ ಲಾಯಕ್ ಅಲಿ (20) ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೈಸ್ಕೂಲ್ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಅಶ್ಲೀಲ ಪೊಟೊಗಳನ್ನ ತೆಗೆದುಕೊಂಡಿದ್ದಾನೆ. ನಂತರ, ಆಕೆಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಅಂತಾ ಬೆದರಿಸಿ, ತಾನು ಹೇಳಿದಲ್ಲಿಗೆ ಬರಬೇಕೆಂದು ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ.
ಬಾಲಕಿ ಒಂಬತ್ತನೇ ತರಗತಿಗೆ ಹೋಗುತ್ತಿದ್ದ ವೇಳೆ ಈ ಯುವಕ ಬೆನ್ನಿಗೆ ಬಿದ್ದು ಪ್ರೀತಿಯ ನಾಟಕ ಮಾಡಿದ್ದಾನೆ. ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವುದು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗುವುದನ್ನು ಮಾಡಿದ್ದಾನೆ.ಈ ವೇಳೆ ಬಾಲಕಿಯ ಖಾಸಗಿ ಫೋಟೋಗಳನ್ನು ತೆಗೆದು ಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆಸರಿಸಿದ್ದಾನೆ. ನಂತರ ನಾನು ಕರೆದಲ್ಲಿಗೆ ಬರಬೇಕು ಎಂದು ಹೇಳಿದಾಗ ಬಾಲಕಿ ಮಾನ ಮರ್ಯಾದೆಗೆ ಹೆದರಿ ಆತ ಕರೆದಲ್ಲೆಲ್ಲ ಹೋಗಿದ್ದಾಳೆ. ಈ ವೇಳೆ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಹೀಗೆ, ಒಂದು ದಿನ ಮುಸ್ಲಿಂ ಯುವಕ ಹಿಂದೂ ಬಾಲಕಿಯನ್ನು ತನ್ನ ಬಾಡಿಗೆ ಮನೆಗೆ ಜರೆದೊಯ್ಯುವಾಗ ಭಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಆಗ, ಹಿಂದೂ ಯುವತಿ ಆತ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದು, ಆಕೆಯನ್ನು ಭಜರಂಗದಳದ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.ನಂತರ, ಅನ್ಯಕೋಮಿನ ಯುವಕನನ್ನು ಹಾಗೂ ವಿದ್ಯಾರ್ಥಿನಿಯನ್ನ ತಕ್ಷಣವೇ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಆ ಸ್ಥಳಕ್ಕೆ ಹಿಂದೂ ಬಾಲಕಿಯ ತಾಯಿಯೂ ಆಗಮಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹೈಸ್ಕೂಲ್ ಯುವತಿ ಎಲ್ಲ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ನಂತರ, ಅಶ್ಲೀಲ ಪೊಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ್ದಾಣೆ ಎಂದು ಆರೋಪಿ ಲಾಯಕ್ ಅಲಿ ವಿರುದ್ದ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲು ಮಾಡಲಾಗಿದೆ.