ಹುಬ್ಬಳ್ಳಿ: ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾಳೆ. ಹೀಗಿದ್ದೂ ಬೇರೆ ಸಂದರ್ಭದಲ್ಲಿ ಧ್ವನಿ ಎತ್ತುತ್ತಿರೋ ನೀವುಗಳು ಯಾಕೆ ರಾಜ್ಯದ ಮನೆ ಮಗಳು ಮೃತಪಟ್ಟಾಗ ಎತ್ತುತ್ತಿಲ್ಲ ಅಂತ ಬಿಗ್ ಬಾಸ್ ಸ್ಪರ್ಧಿ ಪ್ರಥಮ್, ನಟ ಪ್ರಕಾಶ್ ರಾಜ್, ಚೇತನ್ ಪ್ರಶ್ನಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿನ ನೇಹಾ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನೇಹಾ ಅವರ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಜಸ್ಟಿಸ್ ಫಾರ್ ಲವ್ ಅಂದ್ರೆ ಏನು.? ಅವರಿಗೆ ಭಾರತ ರತ್ನ ಕೊಡಬೇಕಾ ಎಂಬುದಾಗಿ ಗರಂ ಆದಂತ ಅವರು, ಎಲ್ಲದಕ್ಕೂ ಪ್ರಧಾನಿ ಮೋದಿ ಪ್ರಶ್ನೆ ಮಾಡ್ತೀರ. ಆದ್ರೇ ಇಲ್ಲಿ ರಾಜ್ಯದ ಮಗಳು ನೇಹಾ ಮೃತಪಟ್ಟಿದ್ದಾಳೆ. ಯಾಕೆ ನೀವು ಧ್ವನಿ ಎತ್ತುತ್ತಾ ಇಲ್ಲ ಅಂತ ಪ್ರಕಾಶ್ ರಾಜ್, ಚೇತನ್ ಗೆ ಪ್ರಶ್ನಿಸಿದರು.
ಉತ್ತರಕ್ಕೆ ಬೆಣ್ಣೆ ದಕ್ಷಿಣಕ್ಕೆ ಸುಣ್ಣ ನೀಡುವ ಬಿಜೆಪಿ ಸರ್ಕಾರದ ಈ ಮಹಾಮೋಸಕ್ಕೆ ಅಂತ್ಯ ಹಾಡಿ- ದಿನೇಶ್ ಗುಂಡೂರಾವ್
ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!