ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.ಕಾಂಗ್ರೆಸ್ ಸರ್ಕಾರ ಜನರ ಬದುಕಿನ ಗ್ಯಾರಂಟಿಯನ್ನು ಕಸಿದುಕೊಂಡಿದೆ ಎಂದು ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ದೃಷ್ಟಿಕರಣ ನೀತಿಯೇ ಇಂತಹ ಕೊಲೆಗೆ ಕಾರಣ. ರಾಜ್ಯ ಸರ್ಕಾರ ಸಾಂತ್ವನ ಹೇಳಿಲ್ಲ. ವಿದ್ಯಾರ್ಥಿನಿ ಕೊಲೆ ಖಂಡಿಸಿಲ್ಲ. ತಮ್ಮದೇ ಪಕ್ಷದ ಪಾಲಿಗೆ ಸದಸ್ಯ ಇದ್ದರೂ ಕೂಡ ಸರ್ಕಾರ ಈ ಘಟನೆಯನ್ನು ಖಂಡನೇ ಮಾಡಿಲ್ಲ ಎಂದು ಕಿಡಿ ಕಾರಿದರು.
ಸರ್ಕಾರ ಕೊಲೆಗಾರನ ಮನೆಗೆ ಪೊಲೀಸ್ ಗ್ಯಾರಂಟಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಟಿ ಹರ್ಷಿತ ಪೂರ್ಣಚ್ಚ ಮೇಲು ಹಲ್ಲೆಯಾಗಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಮಾತ್ರ ಎಲ್ಲಾ ಗ್ಯಾರಂಟಿ ಇದೆ. ನೇಹಾ ಫಯಾಜ್ ಮಧ್ಯೆ ಪ್ರೇಮ ವಿತ್ತು ಅಂತ ಬಿಂಬಿಸಲಾಗುತ್ತಿದೆ. ಪೊಲೀಸರು ಸರ್ಕಾರದ ಅಣತಿಯಂತೆಯೇ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಧಾರವಾಡದಲ್ಲಿ ‘ಜಸ್ಟೀಸ್ ಫಾರ್ ಲವ್’ ಸ್ಟೇಟಸ್ ವಿಚಾರವಾಗಿ ಮಾತನಾಡಿದ ಅವರು ಕೊಲೆಯಾಗಿದ್ದೆ ಸರಿ ಎನ್ನುವಂತೆ ಸ್ಟೇಟಸ್ ಇಟ್ಟುಕೊಂಡಿದ್ದಾರೆ.ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೇಳಿದ್ದೇವೆ.ಅಂತಹ ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಇದೆ ಎಂದು ಹುಬ್ಬಳ್ಳಿ ನಗರದಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ನೀಡಿದರು.