ಬೆಂಗಳೂರು : ಮತದಾರರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಭಾರತ ಚುನಾವಣಾ ಆಯೋಗವು ಸೂಚನೆ ನೀಡಿದ್ದು, ಇಂದು ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಲೋಕಸಭಾ ಚುನಾವಣೆ-2024 ರ ಮತದಾನವು ರಾಜ್ಯದಲ್ಲಿ ದಿನಾಂಕ 26.04.2024 ಹಾಗೂ 07.05.2024 ಗಳಂದು ಎರಡು ಹಂತಗಳಲ್ಲಿ ನಡೆಯಲಿದೆ, ಈ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ಭಾರತ ಚುನಾವಣಾ ಆಯೋಗವು ಸೂಚಿಸಿರುತ್ತದೆ.
ಅದರಂತೆ, ಜಾಗೃತಿ ಮೂಡಿಸುವ ಸಲುವಾಗಿ, “ನಮ್ಮ ನಡೆ ಮತಗಟ್ಟೆಯ ಕಡೆ” ಎಂಬ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಎರಡನೇ ಹಂತದ ಚುನಾವಣೆ ನಡೆಯುವ ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ: 21.04.2024 ಹಾಗೂ ಮೂರನೇ ಹಂತದ ಚುನಾವಣೆ ನಡೆಯುವ ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ: 28.04.2024 ರಂದು ಚುನಾವಣಾ ಧ್ವಜಾರೋಹಣ ಕಾರ್ಯಕ್ರಮವನ್ನು ಬೆಳಿಗ್ಗೆ 08:00 ಗಂಟೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಮತಗಟ್ಟೆಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಗಳು (Assured Minimum Facilities-AMF) ಇರುವ ಕುರಿತು ಖಚಿತಪಡಿಸಿಕೊಂಡು, ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ.
ಕಾರ್ಯಕ್ರಮ ಒಳಗೊಳ್ಳಬೇಕಾದ ಅಂಶಗಳ ವಿವರ ಈ ಕೆಳಕಂಡಂತಿದೆ.
1. ರಾಜ್ಯ ಮಟ್ಟದಲ್ಲಿ ಒಂದೇ ರೀತಿಯ “ಮತದಾನದ ದಿನ- ಏಪ್ರಿಲ್ 26 (ಮೊದಲನೇ ಹಂತದ ಕ್ಷೇತ್ರಗಳಿಗೆ) ಮತ್ತು ಮೇ 07 (ಎರಡನೇ ಹಂತದ ಕ್ಷೇತ್ರಗಳಿಗೆ)” ಹಾಗೂ ಸಮಯ ಬೆಳಿಗ್ಗೆ 07:00 ರಿಂದ ಸಂಜೆ 06:00 ರವರೆಗೆ ಎಂದು ಒಳಗೊಂಡಿರುವ ಧ್ವಜದ ವಿನ್ಯಾಸವನ್ನು ಸಿದ್ದಪಡಿಸಿ ನೀಡಲಾಗುವುದು. ಈ ವಿನ್ಯಾಸವನ್ನು ತಮ್ಮ ಹಂತದಲ್ಲಿ ಬಟ್ಟೆಯ ಮೇಲೆ ಮುದ್ರಿಸಿ, ಪ್ರತಿ ಮತಗಟ್ಟೆಯ ಮೇಲೆ ಧ್ವಜಾರೋಹಣವನ್ನು ನೆರವೇರಿಸಬೇಕು ಹಾಗೂ ಮತದಾನದ ದಿನದವರೆಗೆ ಧ್ವಜವನ್ನು ಮತಗಟ್ಟೆ ಕೇಂದ್ರಗಳಲ್ಲಿ ಹಾರಿಸ ತಕ್ಕದ್ದು. (The flag shall be rectangular in shape. The ratio of the length to the height (width) of the flag shall be 3:2 feet)
2. ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಬೇಕು. ಮತದಾರರನ್ನು ಸೆಳೆಯಲು ಸ್ಥಳೀಯ ಜಾನಪದ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.
3. ಕಾಲ್ನಡಿಗೆ 250 ಹಮ್ಮಿಕೊಳ್ಳಬಹುದಾಗಿದೆ. ಸೇರಿದಂತೆ ಚುನಾವಣಾ ವಿಷಯನ್ನೊಳಗೊಂಡ ಕಾರ್ಯಕ್ರಮಗಳನ್ನು
4. ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪ್ರೇರಿತ ಅಥವಾ ಸಂಬಂಧಿತ ವ್ಯಕ್ತಿಗಳು ಭಾಗವಹಿಸುವುದಕ್ಕೆ ಅವಕಾಶ ನೀಡಬಾರದು.
5. ಪ್ರತಿ ಮತಗಟ್ಟೆಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ಛಾಯಾಚಿತ್ರ/ವಿಡಿಯೋಗಳನ್ನು ಮುಖ್ಯ ಚುನಾವಣಾಧಿಕಾರಿಗಳ ಸಾಮಾಜಿಕ ಜಾಲತಾಣಗಳಿಗೆ ಟ್ಯಾಗ್ ಮಾಡಬೇಕು ಹಾಗೂ ಹಂಚಿಕೊಳ್ಳಬೇಕು. https://www.facebook.com/ceokarnataka https://instagram.com/ceokarnataka https://twitter.com/ceo karnataka
6. ಒಂದು ಗಂಟೆಗೆ ಕಡಿಮೆ ಇಲ್ಲದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಒಟ್ಟಾರೆ ಪ್ರತಿ ಮತಗಟ್ಟೆಯನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.