ಧಾರವಾಡ : ಇತ್ತೀಚೆಗೆ ಧಾರವಾಡದ ಅಪಾರ್ಟ್ಮೆಂಟ್ ಒಂದರ ಬಳಿ 18 ಕೋಟಿ ಜಪ್ತಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉದ್ಯಮಿ ಯುಬಿ ಶೆಟ್ಟಿ ಅಳಿಯ ಪುನೀತ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಹಣದ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಹೌದು ಉದ್ಯಮಿ ಯು ಬಿ ಶೆಟ್ಟಿ ಅಳಿಯ ಡಾಕ್ಟರ್ ಪುನೀತ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಧಾರವಾಡದಲ್ಲಿ 18 ಕೋಟಿ ಹಣ ಜಪ್ತಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಯು.ಬಿ ಶೆಟ್ಟಿ ಅಳಿಯನಿಗೆ ಐಟಿ ಶಾಕ್ ನೀಡಿದೆ.
18 ಕೋಟಿ ಹಣ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉದ್ಯಮಿ ಯುವಿ ಶೆಟ್ಟಿ ಅಳಿಯ ಡಾ. ಪುನೀತ್ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಹಲವು ದಾಖಲೆಗಳನ್ನ ಪರೀಶೀಲನೆ ನಡೆಸಿದ್ದಾರೆ ಬಳಿಕ ವಿಚಾರಣೆಗೆ ಹಾಜರಾಗಲು ಅವರಿಗೆ ನೋಟಿಸ್ ನೀಡಿದೆ.