ದಾವಣಗೆರೆ : ರಾಮ ನವಮಿಯ ವೇಳೆ 2 ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು ಈ ವೇಳೆ ಇಬ್ಬರು ವ್ಯಕ್ತಿಗಳಿಗೆ ಚಾಕು ಇರಿದಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ನೆಲ್ಲೂರು ಕ್ಯಾಂಪ್ ಬಳಿ ಈ ಘಟನೆ ನಡೆದಿದೆ.
ನಾನು ಸ್ಪರ್ಧಿಸಿದ್ದರೆ ಖಂಡಿತ ದರ್ಶನ್ ನನ್ನ ಪರ ಪ್ರಚಾರ ಮಾಡುತ್ತಿದ್ದರು : ಸಂಸದೆ ಸುಮಲತಾ ಅಂಬರೀಷ್
ರಾಮ ನವಮಿ ಆಚರಣೆಯ ವೇಳೆ ಘರ್ಷಣೆಯಲ್ಲಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಇದೆ 17ರಂದು ರಾಮನವಮಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆ ಹನುಮಂತ ಹಾಗೂ ಗೋಪಾಲ್ ಎಂಬವರಿಗೆ ಚಾಕು ಇರಿಯಲಾಗಿದೆ. ಇದೇ ಘಟನೆಯಲ್ಲಿ ಅನ್ಯಕೋಮಿನ ಓರ್ವ ಯುವಕನಿಗೂ ಕೂಡ ಗಾಯವಾಗಿದೆ.
ಕಾಂಗ್ರೆಸ್ ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಘಟನೆ ಸಂಭಂದ ಚೆನ್ನಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2022ರಲ್ಲೂ ಕೂಡ ರಾಮನವಮಿ ಆಚರಣೆ ವೇಳೆ ಘರ್ಷಣೆ ಉಂಟಾಗಿತ್ತು. ಮುಂಜಾಗ್ರತ ಕ್ರಮವಾಗಿ ನಲ್ಲೂರು ಕ್ಯಾಂಪ್ ನಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ